ಕೃಷಿ ವಿಚಾರ ಸಂಕಿರಣ

ಮೂಲ್ಕಿ: ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಗಳಿಕೆ ಸಾಧ್ಯ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ಧರ್ಮಗುರುಗಳಾದ ಫಾ. ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಹೇಳಿದರು.
ಕೆಥೋಲಿಕ್ ಸಭಾ ಮೂಲ್ಕಿ ಘಟಕದ ಆಶ್ರಯದಲ್ಲಿ ಭಾನುವಾರ ಸೈಂಟ್ ಜೋಸೆಫ್ ಹಾಲ್‌ನಲ್ಲಿ ನಡೆದ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನಾನುಭವದಿಂದ ಮಾತ್ರ ಕೃಷಿಯಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದ್ದು ಕೃಷಿಕರು ಆಧುನಿಕ ತಂತ್ರಜ್ಞಾನ ಸಹಿತ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ಲಾಭದಾಯಕ ಕೃಷಿ ನಡೆಸಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪ್ರಗತಿಪರ ಕೃಷಿಕ ಮೈಕಲ್ ಕೋರ‍್ಡಾ ಮಾಹಿತಿ ನೀಡಿ, ಕೃಷಿಯ ಬಗ್ಗೆ ಆಸಕ್ತಿ ಹಾಗೂ ಪೂರ್ವಾನುಭವಗಳು ಉತ್ತಮ ಫಲಿತಾಂಶ ನೀಡಲು ಸಾಧ್ಯವಿದೆ. ನಮ್ಮ ಪ್ರದೇಶಾನುಸಾರವಾಗಿ ವಿವಿಧ ಬೆಳೆಗಳನ್ನು ಆಯ್ಕೆಮಾಡಿ ಬೆಳೆಸುವುದು ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯುದರಿಂದ ಉತ್ತಮ ಇಳುವರಿ ಹಾಗೂ ಅಧಿಕ ಲಾಭ ಗಳಿಕೆ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆಥೋಲಿಕ್ ಸಭಾ ಮೂಲ್ಕಿ ಘಟಕದ ಅಧ್ಯಕ್ಷ ರೋಲ್ಫಿ ಡಿಕೋಸ್ಟಾ ವಹಿಸಿದ್ದರು. ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ರೈಮಂಡ್ ರೆಬೆಲ್ಲೋ,ಮೂಲ್ಕಿ ಲಯನ್ಸ್ ಅಧ್ಯಕ್ಷೆ ಶಿಲ್ಪಾ ಪ್ರಭೋದ್ ಕುಡ್ವಾ, ಮೂಲ್ಕಿ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಪಿ.ಶೆಟ್ಟಿ, ಮೂಲ್ಕಿ ಮೆಡಲಿನ್ ಕೋನ್ವೆಂಟ್ ಸುಪೀರಿಯರ್ ಭಗಿನಿ ನಂದಿತಾ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಸುರೇಶ್ ಅರಾಹ್ನ ವೇದಿಕೆಯಲ್ಲಿದ್ದರು. ರೋಲ್ಪಿ ಡಿಕೋಸ್ಟಾ ಸ್ವಾಗತಿಸಿ ನಿರೂಪಿಸಿದರು.

Mulki-13071702

Comments

comments

Comments are closed.

Read previous post:
Kinnigoli-16071701
ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ

ಕಿನ್ನಿಗೋಳಿ : ಕನ್ನಡ ಶಾಲೆಯಲ್ಲಿ ಕಲಿತ ಸಾವಿರಾರು ಮಕ್ಕಳು ಉನ್ನತ ಸ್ಥಾನ ಮಾನದಲ್ಲಿ ಇದ್ದಾರೆ ಆದ್ದರಿಂದ ಕನ್ನಡ ಶಾಲೆಯ ಬಗ್ಗೆ ಕೀಳರಿಮೆ ಇರಿಸಿಕೊಳ್ಳಬಾರದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೆಲವೊಂದು ಸವಲತ್ತುಗಳಿಂದ...

Close