ಇಂಜಿನಿಯರ‍್ಸ್ ಡೇ

ಕಿನ್ನಿಗೋಳಿ : ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಕಾರಣವಾದ ತಂದೆ ತಾಯಿ ಮತ್ತು ಗುರುಹಿರಿಯರನ್ನು ಗೌರವಿಸಿ ತಮ್ಮ ವಿದ್ಯಾಸಂಸ್ಥೆಯ ಋಣವನ್ನು ತೀರಿಸಲು ಯಾವಾಗಲೂ ಮರೆಯಬಾರದು. ಸರ್ ಎಮ್.ವಿಶ್ವೇಶ್ವರಯ್ಯನವರಂತೆ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನಿಟ್ಟು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದರೆ , ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಅನಿಲ್ ಸೌಂಡ್ಸ್ ಮತ್ತು ವರುಣ್ ಇಲೆಕ್ಟ್ರಿಕಲ್ಸ್ & ಇಲೆಕ್ಟ್ರಾನಿಕ್ಸ್ ಶಂಕರಪುರ ಇದರ ಮಾಲಕ ಜೋಸೆಫ್ ಅನಿಲ್ ಪ್ರಶಾಂತ್ ಡೇಸಾ ಹೇಳಿದರು.
ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆ ಮುಲ್ಕಿ ರಾಮಕೃಷ್ಟ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು,ಎನ್.ಎಸ್.ಎಸ್ ಘಟಕ, ಹಾಗೂ ಎನ್.ಇ.ಟಿ, ರೋವರ್ಸ್ ಘಟಕ ಜಂಟಿಯಾಗಿ ಆಯೋಜಿಸಿರುವ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರ 157ನೇ ಜನ್ಮ ದಿನದಂದು ಸಂಸ್ಥೆಯ ಸೆಮಿನಾರ್ ಹಾಲ್‌ನಲ್ಲಿ ನಡೆದ ಇಂಜಿನಿಯರ‍್ಸ್ ಡೇ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಸಂಸ್ಥೆಯ ಎಲ್ಲಾ ತಾಂತ್ರಿಕ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ವೈ.ಎನ್.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಗುರುರಾಜ್ ಭಟ್, ಶಿವರಾಮ ದೇವಾಡಿಗ, ರಾಘವೇಂದ್ರ ಅಡಿಗ, ವಿದ್ಯಾರ್ಥಿಗಳ ಪರವಾಗಿ ಸಾಹಿಲ್ ಮತ್ತು ಸುಮನ್ ಅವರು ವಿಶ್ವೇಶ್ವರಯ್ಯನವರ ಜೀವನದ ಬಗ್ಗೆ ಮಾತನಾಡಿದರು.
ಸುರೇಶ್ ಎಸ್. ಮತ್ತು ಉದಯಕುಮರ್ ಉಪಸ್ಥಿತರಿದ್ದರು
ವಿಧ್ಯಾರ್ಥಿನಿಗಳಾದ ನಿಖಿತಾ, ರಕ್ಷಿತಾ ಮತ್ತು ಕಾವ್ಯ ಸಿ. ದೇವಾಡಿಗ ಪ್ರಾರ್ಥನೆಗೈದು ಪ್ರಥ್ವೀಶ್ ಸ್ವಾಗತಿಸಿದರು. ವಿಶಾಲ್ ವಂದಿಸಿದರು. ಪವಿತ್ರ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯನವರ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮ ನಡೆಯಿತು.

Kinnigoli-18091705

Comments

comments

Comments are closed.

Read previous post:
Kinnigoli-18091703
ಯಕ್ಷಗಾನ : ಜಿಲ್ಲಾ ಮಟ್ಟದಲ್ಲಿ ದ್ವಿತೀಯಾ

ಕಿನ್ನಿಗೋಳಿ : ಉಪ್ಪಿನಂಗಡಿಯ ಇಂದ್ರಪ್ರಸ್ಥ ಸಮೂಹ ಸಂಸ್ಥೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಯಕ್ಷಗಾನ ಹಿರಿಯರ ಸ್ಪರ್ಧೆಯಲ್ಲಿ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ...

Close