ಕುಬಣೂರು ಶ್ರೀಧರ ರಾವ್

ಕಟೀಲು: ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತ ಕುಬಣೂರು ಶ್ರೀಧರ ರಾವ್ (66) ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಕೆಲವು ದಿನಗಳ ಹಿಂದೆ ಸಿಂಗಾಪುರದಲ್ಲಿ ತನ್ನ ಮಗಳ ಮನೆಗೆ ಹೋಗಿದ್ದು ಅನಾರೋಗ್ಯದ ನಿಮಿತ್ತ ಬೆಂಗಳೂರಿಗೆ ಕರೆತಂದು ಇಂದು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು ಅಸ್ಪತ್ರೆಯಲ್ಲಿ ನಿಧನರಾದರು. ಕಟೀಲು ಮೇಳದ ಪ್ರಧಾನ ಬಾಗವತರಾಗಿದ್ದ ಕದ್ರಿ, ನಂದಾವರ, ಅರುವ, ಬಪ್ಪನಾಡು, ಕಾಂತಾವರ, ಕಳೆದ ೨೫ ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೇಳದಲ್ಲಿ ಇದ್ದುಕೊಂಡೇ ಯಕ್ಷ ಪ್ರಭಾ ಎಂಬ ಯಕ್ಷಗಾನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು.
ಕುಬಣೂರು ಓದಿದ್ದು, ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮ. ಜೀವನ ಕಂಡುಕೊಂಡದ್ದು ಯಕ್ಷಗಾನದಲ್ಲಿ , ಶ್ರೀಧರ ರಾಯರು ಐ.ರಘುಮಾಸ್ತರರಿಂದ ಕರ್ನಾಟಕ ಸಂಗೀತ, ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಮದ್ದಳೆವಾದನ, ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಬೇಕೂರು ಕೇಶವರಿಂದ ನಾಟ್ಯಾಭ್ಯಾಸ, ಟಿ.ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿತು
ಬದುಕಿನಲ್ಲಿ ಏಳುಬೀಳುಗಳನ್ನು ಎದುರಿಸುತ್ತಾ ಮುನ್ನಡೆದವರು
ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟಣ ಮಣೆ. ಪ್ರಸಂಗಗಳ ರಚಿಸಿದ ಯಕ್ಷರಂಗದ ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ ’ಯಕ್ಷವಿಜಯ ವಿಠಲ’ ಕೃತಿನ್ನು ರಚಿಸಿದ್ದರು.
ಕುಬಣೂರು ಶ್ರೀಧರ ರಾವ್ ಕಳೆದ ಬಾರಿ ಅಭಿಮಾನಿಗಳಿಂದ ಅದ್ದೂರಿ ಸನ್ಮಾನವನ್ನು ಸ್ವೀಕರಿಸಿದ್ದು, ಇದುವರೆಗೆ ಹಲವಾರು ಸನ್ಮಾನ ಮತ್ತು ಪ್ರಶಸ್ತಿಗಳು ದೊರಕಿದೆ.

Mulki-13071703 Mulki-13071704

Comments

comments

Comments are closed.

Read previous post:
Mulki-13071702
ಕೃಷಿ ವಿಚಾರ ಸಂಕಿರಣ

ಮೂಲ್ಕಿ: ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಗಳಿಕೆ ಸಾಧ್ಯ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ಧರ್ಮಗುರುಗಳಾದ ಫಾ. ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಹೇಳಿದರು. ಕೆಥೋಲಿಕ್...

Close