ಮೂಲ್ಕಿ ಮೂರ್ತೆದಾರ ಸೇವಾ ಸಹಕಾರಿ ಸಂಘ

ಮೂಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಯುವ ಶಕ್ತಿ ವಿವಿಧ ಉನ್ನತ ಉದ್ಯೋಗಗಳಿಗೆ ವಲಸೆ ಹೋಗುತ್ತಿರುವ ಕಾರಣ ಹಿರಿಯರಿಂದ ಮಾತ್ರ ಮೂರ್ತೆದಾರಿಕೆ ಉಳಿದಿದ್ದು ಮುಂದಿನ ದಿನಗಳಲ್ಲಿ ವೃತ್ತಿ ನಶಿಸುವ ಭೀತಿ ಇದೆ ಎಂದು ಮೂಲ್ಕಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಮೂಲ್ಕಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಮೂರ್ತೆದಾರಿಕೆ ಮಾತ್ರವಲ್ಲದೆ ವಿತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಕಾರಣ ಲಾಭ ಗಳಿಕೆ ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಸದಸ್ಯರಿಗೆ ವಿಶೇಷ ಸವಲತ್ತುಗಳು ಹಾಗೂ ಶಾಖೆಯ ವಿಸ್ತರಣೆಗೆ ಸಂಸ್ಥೆ ಬದ್ಧವಾಗಿದೆ ಎಂದರು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಕುಮಾರ್ ಕುಬೆವೂರು ವಾರ್ಷಿಕ ವರದಿ ಮಂಡಿಸಿ 2016-17 ಸಾಲಿನಲ್ಲಿ 3ಲಕ್ಷ 18 ಸಾವಿರ 881.49 ನಿವ್ವಳ ಲಾಭ ಗಳಿಕೆಯಾಗಿದ್ದು ಈಬಾರಿ ಶೇ20 ಡಿವಿಡೆಂಡ್ ವಿತರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಈ ಸಂದರ್ಭ ನಿವೃತ್ತಿ ಹೊಂದಿದ ಹಿರಿಯ ಮೂರ್ತೆದಾರರಾದ ಮಹಾಬಲ ಪೂಜಾರಿ ನಡಿಕೊಪ್ಪಲ, ಚಂದ್ರಯ್ಯ ಪೂಜಾರಿ ಏಳಿಂಜೆ, ರಾಘು ಪೂಜಾರಿ ಎಳತ್ತೂರು ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಎಂ. ಚಂದ್ರಶೇಖರ ಸುವರ್ಣ,ಹರೀಂದ್ರ ಸುವರ್ಣ,ಸದಾನಂದ ಪೂಜಾರಿ,ರಮೇಶ ಸುವರ್ಣ,ಕೆ.ರಾಘು ಸುವರ್ಣ, ಸುಧಾಕರ ಜೆ.ಸುವರ್ಣ, ಗಣೇಶ್ ಕುಕ್ಯಾನ್, ಸುನೀತಾ ಡಿ.ಮೂಲ್ಕಿ, ಚರಿಷ್ಮಾ ಉಪಸ್ಥಿತರಿದ್ದರು ಕಾರ್ಯ ನಿರ್ವಹಣಾಧಿಕಾರಿ ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು. ಚಂದ್ರಶೇಖರ ಸುವರ್ಣ ವಂದಿಸಿದರು.

Mulki-18071704

Comments

comments

Comments are closed.

Read previous post:
Mulki-13071704
ಕುಬಣೂರು ಶ್ರೀಧರ ರಾವ್

ಕಟೀಲು: ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತ ಕುಬಣೂರು ಶ್ರೀಧರ ರಾವ್ (66) ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಕೆಲವು ದಿನಗಳ ಹಿಂದೆ ಸಿಂಗಾಪುರದಲ್ಲಿ...

Close