ಮೂಲ್ಕಿ – ಬೋರ್‌ವೆಲ್ ಮರುಪೂರಣ

ಮೂಲ್ಕಿ: ಜಲಮರುಪೂರಣ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಕುಡಿಯುವ ನೀರಿನ ಬವಣೆ ತಪ್ಪಿಸಿಲು ಪರ್ಯಾಯ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ನಗರ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಅಶೋಕ್ ಪೂಜಾರ ಹೇಳಿದರು.
ಮೂಲ್ಕಿ ಕೆ.ಎಸ್.ರಾವ್ ನಗರದ ಬಿಜಾಪುರ ಕಾಲನಿಯಲ್ಲಿ ಬೋರ್‌ವೆಲ್ ಮರುಪೂರಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು.
ಮೂಲ್ಕಿ ವ್ಯಾಪ್ತಿಯಲ್ಲಿಯಾ ಅತೀ ಹೆಚ್ಚು ಜನರು ವಾಸವಾಗಿರುವ ಕೆ.ಎಸ್ ರಾವ್ ನಗರದಲ್ಲಿ ನೀರಿನ ಸಮಸ್ಯೆ ಅತೀ ಹೆಚ್ಚಾಗಿದ್ದು ಇಲ್ಲಿಯವರಿಗಾಗಿ ಶಾಶ್ವತ ಯೋಜನೆ ಅಗತ್ಯವಿದೆ ನಗರ ಪಂಚಾಯಿತಿ ನೀರು ಮರು ಪೂರಣ ಯೋಜನೆಯ ಮೂಲಕ ಜನರ ಅಗತ್ಯಕ್ಕೆ ಸ್ಪಂದಿಸುತ್ತಿರುವುದು ಅಭಿನಂದನೀಯ ಎಂದರು.
ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಅಳ್ವಾ ಮಾತನಾಡಿ, ಮೂಲ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ಪ್ರದೇಶಗಳಲ್ಲಿ ನೀರು ಮರು ಪೂರಣ ವ್ಯವಸ್ಥೆ ಮಾಡಲಾಗಿದ್ದು ಗ್ರಾಮಸ್ಥರು ಇದನ್ನು ಮಾದರಿಯಾಗಿ ತಮ್ಮ ಮನೆಗಳಲ್ಲಿ ಮಳೆ ನೀರು ಮರುಪೂರಣ ವ್ಯವಸ್ಥೆ ಮಾಡಿಕೊಂಡು ಬೇಸಿಗೆಯಲ್ಲಿ ಜಲಕ್ಷಾಮ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭ ಮುಖ್ಯಾಧಿಕಾರಿ ಇಂದು ಎಂ,ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಸದಸ್ಯರಾದ ಪುತ್ತು ಬಾವ, ಸಂದೀಪ್ ಚಿತ್ರಾಪು,ಜಲ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ, ಗುತ್ತಿಗೆದಾರ ಜಿತೇಂದ್ರ ಪುರ್ತಾದೊ,ವೀರಯ್ಯ ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.

Mulki-19071706

Comments

comments

Comments are closed.

Read previous post:
Mulki-19071705
ಬಿ.ರಾಮಕೃಷ್ಣ ಶೆಟ್ಟಿ

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಗೌರವಕ್ಕೆ ಪಾತ್ರವಾದ ಕಟೀಲು ಕೊಡೆತ್ತೂರು ಮಾಗಂದಡಿ ಕುಟುಂಬದ ಯಜಮಾನ ಬಿ.ರಾಮಕೃಷ್ಣ ಶೆಟ್ಟಿ(92) ಅಲ್ಪಕಾಲದ ಅಸೌಖ್ಯದಿಂದ ಮುಂಬೈಯಲ್ಲಿ ಮಂಗಳವಾರ ಮುಂಜಾನೆ ನಿಧನರಾದರು. ಭಾರತೀಯ...

Close