ಕಟೀಲು: ಶ್ರೀಧರ ರಾವ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಯಕ್ಷಗಾನ ಕ್ಷೇತ್ರದಲ್ಲಿ ಹೊಸತನವನ್ನು ಅವಿಷ್ಕರಿಸಿ ಕಲಾವಿದರಿಗೆ ಪೂರಕವಾಗಿ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದು ಇಂದು ನಮ್ಮನ್ನಗಲಿದ ಕುಬಣೂರು ಶ್ರೀಧರ ರಾಯರ ಕಾರ್ಯ ಶ್ಲಾಘನೀಯ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಮಂಗಳವಾರ ನಡೆದ ಕಟೀಲು ಮೇಳದ ಹಿರಿಯ ಭಾಗವತ ಕುಬಣೂರು ಶ್ರೀಧರರಾವ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಮಾತನಾಡಿ ಶ್ರೀಧರ ರಾಯರು ಇಂಜಿನಿಯರ್ ಪದವಿ ಪಡೆದಿದ್ದರೂ ಯಕ್ಷಗಾನದ ಕಡೆಗೆ ಅಪಾರ ಒಲವು ತೋರಿಸಿ ಕಟೀಲು ಮೇಳದಲ್ಲಿ 21ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಯಕ್ಷಗಾನದ ಪತ್ರಿಕೆಯನ್ನು ಆರಂಭಿಸಿ ಯಶಸ್ಸು ಸಾಧಿಸಿದ್ದರು ಎಂದು ಹೇಳಿದರು.
ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ , ಹರಿನಾರಾಯಣ ಆಸ್ರಣ್ಣ , ಕುಮಾರ್ ಆಸ್ರಣ್ಣ , ಹಿರಿಯ ಅರ್ಥಧಾರಿ ಶ್ರೀಧರ್ ಡಿಎಸ್, ವಾಟೆ ಪಡ್ಪು ವಿಷ್ಣು ಶರ್ಮ, ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಕುಬಣೂರು ಅವರ ಬಗ್ಗೆ ಮಾತನಾಡಿದರು.
ಈ ಸಂದರ್ಭ ಸುಧೀರ್ ಶೆಟ್ಟಿ, ಮಧುಕರ ಭಾಗವತ್, ಡಾ| ಶುತಕೀರ್ತಿ ರಾಜ್, ಮಾಡವು ಕೊರಗಪ್ಪ ಶೆಟ್ಟಿ, ಸೋಮಶೇಖರ್, ಅಕ್ಷಯ್ ಮಾರ್ನಡ್, ಗಣೇಶ್ ಚಂದ್ರ ಮಂಡಲ, ವೆಂಕಟೇಶ ಉಡುಪ ಮತ್ತಿತರರಿದ್ದರು ಉಪಸ್ಥಿತರಿದ್ದರು.
ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Kinnigoli-21071705

Comments

comments

Comments are closed.

Read previous post:
Kinnigoli-21071704
ಕೆಮ್ರಾಲ್ – ಪ್ರೌಢ ಶಾಲೆ ಶೈಕ್ಷಣಿಕ ಸಾಧನೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆ ಹೆಚ್ಚಿನ ಶೈಕ್ಷಣಿಕ ಸಾಧನೆಗಾಗಿ ವಿಜಯಾ ಬ್ಯಾಂಕ್ ಪ್ರವರ್ತಿತ ವಿಜಯಾ ಗ್ರಾಮೀಣ ಆಭಿವೃದ್ಧಿ ಪ್ರತಿಷ್ಠಾನ ಮಂಗಳೂರು ನಗದು ಬಹುಮಾನ ಹಾಗೂ...

Close