ಕಿನ್ನಿಗೋಳಿ ಕೃಷಿ ವಿಚಾರ ಸಂಕಿರಣ

ಕಿನ್ನಿಗೋಳಿ: ಕೃಷಿಕರಿಗೆ ಆತ್ಮಸ್ಥೆರ್ಯ ಪ್ರೋತ್ಸಾಹ ಸಹಾಯ ನೀಡುವ ಮೂಲಕ ಸರಕಾರ ಮಾಡಬೇಕಾದ ಕೆಲಸ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಪ್ರಗತಿಪರ ಕೃಷಿಕ ರಮೇಶ್ ರಾವ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ತಳದ ಗ್ರಾಮಾಭಿವೃದ್ದಿ ಯೋಜನೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಅಲ್ಪಾವಧಿ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಧ.ಗ್ರಾ.ಯೋ. ಕಿನ್ನಿಗೋಳಿ ವಲಯದ ಮೇಲ್ವಿಚಾರಕ ಯಶೋಧರ, ಕಿನ್ನಿಗೋಳಿ ವಲಯಾಧ್ಯಕ್ಷೆ ವಿದ್ಯಾಶ್ರೀ ಉಪಸ್ಥಿತರಿದ್ದರು.

ನಂತರ ನಡೆದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಕೃಷಿಕ ರೋನಾಲ್ಡ್ ಸೆರಾವೊ ಗ್ರಾಮೀಣ ಪ್ರದೇಶದ ರೈತರು ಕೃಷಿಕರು ಮಾರ್ಗದರ್ಶನ ಹಾಗೂ ಮಾಹಿತಿ ಕೊರತೆಗಳಿಂದ ಕೃಷಿಯಲ್ಲಿ ಹಿಂದುಳಿದಿದ್ದಾರೆ. ರೈತರು ಆಧುನಿಕ ಕೃಷಿ ಪದ್ಧತಿಯ ಬಗ್ಗೆಯು ಹೆಚ್ಚಿನ ಒಲವು ಆಸಕ್ತಿ ಬೆಳಸಿ ಕೊಂಡರೆ ಕೃಷಿಯನ್ನು ಲಾಭಾದಾಯಕವನ್ನಾಗಿಸಬಹುದು ಎಂದು ಹೇಳಿದರು.
ಮಂಗಳೂರು ಕೆ ವಿ ಕೆ ಯ ವಿಷಯ ತಜ್ಞ ಹರೀಶ್ ಶೆಣ್ಯೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಕಿಲೆಂಜೂರು ಒಕ್ಕೂಟದ ಸುರೇಖಾ ಸ್ವಾಗತಿಸಿದರು. ಕೃಷಿ ಅಧಿಕಾರಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-21071701

Comments

comments

Comments are closed.

Read previous post:
Kateel-20091703
ಕಟೀಲು – ನವರಾತ್ರಿ ಮಹೋತ್ಸವ

ಕಟೀಲು - ನವರಾತ್ರಿ ಮಹೋತ್ಸವ 

Close