ಕಿನ್ನಿಗೋಳಿ ಪರಿಸರದಲ್ಲಿ ನವರಾತ್ರಿ ಉತ್ಸವ

ಅತ್ತೂರು ಕುಂಜಿರಾಯ ದೈವಸ್ಥಾನ
ಶ್ರೀ ಅರಸು ಕುಂಜಿರಾಯ ದೈವಸ್ಥಾನ ಮತ್ತು ಅಖಿಲಾಂಡೇಶ್ವರೀ ದೇವೀ ಸನಿಧಿಯಲ್ಲಿ ಸೆಪ್ಟೆಂಬರ್ 21 ರಿಂದ 29 ರವರೆಗೆ ನಡೆಯಲಿದ್ದು ಪ್ರತೀ ದಿನ ಸಂಜೆ 6 ರಿಂದ ಭಜನೆ, ದುರ್ಗಾನಮಸ್ಕಾರ ಪೂಜೆ, ಹೂವಿನ ಪೂಜೆ, ನವರಾತ್ರಿ ಪೂಜೆ ನಡೆಯಲಿದ್ದು 29 ರಂದು ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಆಯುಧ ಪೂಜೆ ನಡೆಯಲಿದೆ ಎಂದು ದೈವಳದ ಪ್ರಕಟನೆ ತಿಳಿಸಿದೆ.

ಗುತ್ತಕಾಡು ನಾರಾಯಣ ಗುರು ಪರಿಪಾಲನಾ ಸಮಿತಿ
ಬ್ರಹ್ಮಶ್ರೀ ನಾರಾಯಣಗುರು ಪರಿಪಾಲನಾ ಸಮಿತಿ ನಾರಾಯಣಗುರು ನಗರ ತಾಳಿಪಾಡಿ ಕಿನ್ನಿಗೋಳಿಯಲ್ಲಿ ನವರಾತ್ರಿ ಉತ್ಸವ ಸೆಪ್ಟೆಂಬರ್ 21 ರಿಂದ 29 ರವರೆಗೆ ನಡೆಯಲಿದೆ. ಪ್ರತೀ ದಿನ ಸಂಜೆ 7.30 ರಿಂದ 9.30 ರವರೆಗೆ ಭಜನೆ ನಡೆಯಲಿದ್ದು 29 ರಂದು ಭಜನಾ ಮಂಗಳೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.

ಮೂಕಾಂಬಿಕ ದೇವಳ ಶಾಂತಿನಗರ ಗುತ್ತಕಾಡು
ಕಿನ್ನಿಗೋಳಿ ಸಮೀಪದ ಶ್ರೀ ಮೂಕಾಂಬಿಕ ದೇವಳ ಶಾಂತಿನಗರ ಗುತ್ತಕಾಡು ಕಿನ್ನಿಗೋಳಿಯಲ್ಲಿ ಸೆಪ್ಟೆಂಬರ್ 21 ರಿಂದ 29 ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ. 21 ರಂದು ಬೆಳಿಗ್ಗೆ ಗಣ ಹೋಮ ಪ್ರತೀ ದಿನ ತ್ರಿಕಾಲ ಪೂಜೆ ರಾತ್ರಿ 7 ರಿಂದ 8.30 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ, 28 ರಂದು ಚಂಡಿಕಾ ಹವನ, ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

ಸುರಗಿರಿ ಮಹಾಲಿಂಗೇಶ್ವರ ದೇವಳ
ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನವರಾತ್ರಿ ಮಹೋತ್ಸವ ಸೆಪ್ಟೆಂಬರ್ 21 ರಿಂದ 29 ರವರೆಗೆ ನಡೆಯಲಿದೆ. ಪ್ರತೀ ದಿನ ರಾತ್ರಿ ಭಜನೆ ಅನ್ನಸಂತರ್ಪಣೆ ಮತ್ತು 29 ರಂದು ಚಂಡಿಕಾ ಯಾಗ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಳ ಉಳೆಪಾಡಿ
ಕಿನ್ನಿಗೋಳಿ ಸಮೀಪದ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಳ ಉಳೆಪಾಡಿಯಲ್ಲಿ ನವರಾತ್ರಿ ಉತ್ಸವ ಸೆಪ್ಟೆಂಬರ್ 21 ರಿಂದ 29 ರವರೆಗೆ ನಡೆಯಲಿದೆ. ಪ್ರತೀ ದಿನ ಚಂಡಿಕಾಯಾಗ, ಅನ್ನಸಂತರ್ಪಣೆ ನಡೆಯಲಿದ್ದು 29 ರಂದು ಶುಕ್ರವಾರ ಸಾಮೂಹಿಕ ಚಂಡಿಕಾ ಯಾಗ ಮತ್ತು ದಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್ ತಿಳಿಸಿದ್ದಾರೆ.

ಅತ್ತೂರು ಬೈಲು ಶ್ರೀ ಮಹಾಗಣಪತಿ ಮಂದಿರ
ಅತ್ತೂರು ಬೈಲು ಶ್ರೀ ಮಹಾಗಣಪತಿ ಮಂದಿರದಲ್ಲಿ ನವರಾತ್ರಿ ಉತ್ಸವ ಸೆಪ್ಟೆಂಬರ್ 21 ರಿಂದ 29 ರವರೆಗೆ ನಡೆಯಲಿದ್ದು ಪ್ರತೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಂದಿರದ ಗಣಪತಿ ಉಡುಪ ತಿಳಿಸಿದ್ದಾರೆ.

ಮೂರುಕಾವೇರಿ ಶ್ರೀ ಮಹಾಮ್ಮಾಯಿ ದೇವಳ
ಶ್ರೀ ಮಹಾಮ್ಮಾಯಿ ದೇವಳ ಮೂರು ಕಾವೇರಿಯಲ್ಲಿ ನವರಾತ್ರಿ ಮಹೋತ್ಸವ ಸೆಪ್ಟೆಂಬರ್ 21ರಿಂದ 29ರವರೆಗೆ ನಡೆಯಲಿದೆ 21ರಂದು ಚಂಡಿಕಾಯಾಗ, 29 ರಂದು ಮಹಮ್ಮಾಯಿ ದೇವರ ದರ್ಶನ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

ಕಿನ್ನಿಗೋಳಿ ಶಾರದಾ ಮಹೋತ್ಸವ
ಕಿನ್ನಿಗೋಳಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ದ್ವಿತೀಯ ವರ್ಷದ ಶ್ರೀ ಶಾರದಾ ಮಹೋತ್ಸವ ಸೆಪ್ಟೆಂಬರ್ 27ರಿಂದ ಆಕ್ಟೋಬರ್ 1 ರವರೆಗೆ ಕಿನ್ನಿಗೋಳಿ ಮಹಮ್ಮಾಯೀ ಕಟ್ಟೆಯ ಬಳಿಯ ಮಂಟಪದಲ್ಲಿ ನಡೆಯಲಿದೆ. ಪ್ರತೀ ದಿನ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಆಕ್ಟೋಬರ್ 1 ರಂದು ಸಂಜೆ 4.30 ಕ್ಕೆ ಶೋಭಾಯಾತ್ರೆ ಕಿನ್ನಿಗೋಳಿಯಿಂದ ಮೆರವಣಿಗೆಯಲ್ಲಿ ಹೊರಟು ಶ್ರೀ ಕ್ಷೇತ್ರ ಕಟೀಲಿನ ನಂದಿನಿ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

ಕೊಡೆತ್ತೂರು ನವರಾತ್ರಿ ಸೇವಾ ಸಮಿತಿ ಮೆರವಣಿಗೆ
ಕೊಡೆತ್ತೂರು ನವರಾತ್ರಿ ಸೇವಾ ಸಮಿತಿ ಮತ್ತು ಊರ ಹತ್ತು ಸಮಸ್ತರಿಂದ ಸೆಪ್ಟೆಂಬರ್ 25 ಲಲಿತಾ ಪಂಚಮಿಯಂದು 53ನೇ ವರ್ಷದ ನವರಾತ್ರಿ ಮೆರವಣಿಗೆ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ಮಲ್ಲಿಗೆಯಂಗಡಿ ಮೂಡು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮೂಲಕ ಕಟೀಲು ದುರ್ಗಾಪರಮೇಶ್ವರೀ ಸನ್ನಿದಾನಕ್ಕೆ ಸಾಗಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

 ಕಟೀಲು ತೃತೀಯ ದಿನದ ನವರಾತ್ರಿ ಮೆರವಣಿಗೆ
ಕಟೀಲು ತೃತೀಯ ದಿನದ 32 ನೇ ವರ್ಷದ ನವರಾತ್ರಿ ಮೆರವಣಿಗೆ ಸೆಪ್ಟೆಂಬರ್ 23 ರಂದು ನಡೆಯಲಿದೆ. ರಾತ್ರಿ 7 ಗಂಟೆಗೆ ಕಟೀಲು ಕಲ್ಯಾಣ ಮಂಟಪದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವಿವಿಧ ದೃಶ್ಯ ವೈಭವದೊಂದಿಗೆ ಹುಲಿವೇಷ ಮೆರವಣಿಗೆ ಹೊರಟು ಕಟೀಲು ದೇವಿಯ ಸನ್ನಿದಾನಕ್ಕೆ ಸಾಗಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

 

Comments

comments

Comments are closed.

Read previous post:
Kinnigoli-21071703
ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆ

ಕಿನ್ನಿಗೋಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಹರಿಪಾದ ಮತ್ತು ಪರಶುರಾಮ ಯುವಕ ವೃಂದ ಹರಿಪಾದ...

Close