ಸ್ವಚ್ಚ ಪರಿಸರ ಹಾಗೂ ಗಿಡಮರಗಳ ರಕ್ಷಣೆ

ಮೂಲ್ಕಿ: ಸ್ವಚ್ಚ ಪರಿಸರ ಹಾಗೂ ಗಿಡಮರಗಳ ರಕ್ಷಣೆಯೊಂದಿಗೆ ಯುವ ಸಮಾಜಕ್ಕೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಮೂಲ್ಕಿ ಲಯನ್ಸ್ ಕ್ಲಬ್‌ ಹಮ್ಮಿಕೊಂಡಿದೆ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷೆ ಶಿಲ್ಪಾ ಪ್ರಭೋದ್ ಕುಡ್ವಾ ಹೇಳಿದರು.
ಮೂಲ್ಕಿ ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್ ಪ್ರಯೋಜಕತ್ವದಲ್ಲಿ ಶಾಲೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭ ಮೂಲ್ಕಿ ಮೂಲ್ಕಿ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಲಯನ್ಸ ಹಿರಿಯ ಸದಸ್ಯರಾದ ಕುಬೆವೂರು ಮುರಳೀಧರ ಭಂಡಾರಿ,ಹರೀಶ್ ಪುತ್ರನ್, ಸದಾಶಿವ ಹೊಸದುರ್ಗ,ಪ್ರಭೋದ್ ಕುಡ್ವಾ, ಸುಜಿತ್ ಸಾಲ್ಯಾನ್, ಕಿಶೋರ್ ಶೆಟ್ಟಿ,ಲಯನ್ಸ್ ಕಾರ್ಯದರ್ಶಿ ಶೋಭಾ ಸುಜಿತ್, ಲಯನೆಸ್ ಅಧ್ಯಕ್ಷದೆ ಶೀತಲ್ ಸುಶೀಲ್,ಶಿಕ್ಷಣ ಇಲಾಖೆಯ ಸಿ.ಆರ.ಪಿ ನೀತಾ ತಂತ್ರಿ, ಮುಖ್ಯ ಶಿಕ್ಷಕಿ ಸುಜಾತ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Mulki-20071706

Comments

comments

Comments are closed.

Read previous post:
Kateel-21091701
ಶ್ರೀವಾಣಿ ಸೋಮಶೇಖರ ಮಯ್ಯರಿಂದ ಸಂಗೀತ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಗುರುವಾರ ನವರಾತ್ರಿ ಪ್ರಯುಕ್ತ ಶ್ರೀವಾಣಿ ಸೋಮಶೇಖರ ಮಯ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Close