ಮೂಲ್ಕಿ -ಅತಿಥಿಗ್ರಹ ಉದ್ಘಾಟನೆ

ಮೂಲ್ಕಿ : ಸ್ವಾರ್ಥರಹಿತ ಮನಸ್ಸು ಸತ್ಯವಾಖ್ಯ ನಿವೇದನೆಯ ಹಿಂದೆ ಭಗವಂತನ ಸಹಾಯವಿದೆ ಎಂದು ಸಿ.ಎಸ್.ಐ ಕರ್ನಾಟಕ ಸಭಾ ಪ್ರಾಂಥ್ಯದ ಧರ್ಮಾಧ್ಯಕ್ಷರಾದ ರೈಟ್ ರೆ. ಮೋಹನ್ ಮನೋರಾಜ್ ಹೇಳಿದರು.
ಮೂಲ್ಕಿ ಸಿ.ಎಸ್.ಐ ಬಾಲಿಕಾಶ್ರಮದಲ್ಲಿ ನೂತನವಾಗಿ ನಿರ್ಮಿಸಲಾದ ಅತಿಥಿಗ್ರಹದ ಉದ್ಘಾಟನೆ ನೆರವೇರಿಸಿ ಆಶೀರ್ವಚಿಸಿದರು.
ನಿರ್ಗತಿಕ ಮಕ್ಕಳ ಸೇವೆಯನ್ನು ಪರಮಾತ್ಮನ ಸೇವೆಎಂದು ತಿಳಿದು ಅನಾದಿ ಕಾಲದಿಂದಲೂ ಈ ಕೇಂದ್ರ ಉತ್ತಮ ಗುಣಮಟ್ಟದ ಸೇವೆ ನೀಡುತ್ತಾ ಬಂದಿದೆ ಇಲ್ಲಿನ ಮಕ್ಕಳು ಇದು ತಮ್ಮದೇ ಮನೆ ಇಲ್ಲಿನ ಮುಖ್ಯಸ್ಥರು ತಮ್ಮ ಪೋಷಕರು ಎಂದು ತಿಳಿದುಕೊಂಡು ಸಾಧನೆ ಮಾಡಿ ಉನ್ನತ ವ್ಯಕ್ತಿಗಳಾಗಬೇಕು ಎಂದರು.
ಈ ಸಂದರ್ಭ ಅತಿಥಿಗಳಾಗಿ ಡಯಾಸಿಸ್ ಖಾಜಾಂಜಿ ವಿನ್ಸೆಂಟ್ ಪಾಲನ್ನಾ.ಕಾರ್ಯದರ್ಶಿ ವಿಲಿಯಂ ಕೇರಿ, ಉಡುಪಿ ವಲಯಾಧ್ಯಕ್ಷರಾದ ಸ್ಟೀವನ್ ಸರ್ವೋತ್ತಮ,ಬೋರ್ಡಿಂಗ್ ಹೋಂ ಕನ್ವೀನರ್ ರೆ.ಎಲಿಷ್,ಕೊ-ಆರ್ಡಿನೇಟರ್ ರೆಜಿನಾಲ್ಡ್ ಸೋನ್ಸ್.ಮೂಲ್ಕಿ ಸಿ.ಎಸ್.ಐ ಯುನಿಟಿ ಚರ್ಚು ಸಭಾ ಪಾಲಕರಾದ ರೆ.ಎಡ್ವರ್ಡ್ ಕರ್ಕಡ, ರೆ.ದಿಲ್ಲೋನ್, ವಿನ್ಸೆಂಟ್ ಸಾಲಿನ್ಸ್, ಸಂಸ್ಥೆಯ ವಾರ್ಡನ್ ರೆ.ಶಶಿಕಲಾ ಅಂಚನ್ ಉಪಸ್ಥಿತರಿದ್ದರು.
ಶಶಿಕಲಾ ಅಂಚನ್ ಸ್ವಾಗತಿಸಿದರು. ಜೆನಿಫರ್ ನಿರೂಪಿಸಿ ವಂದಿಸಿದರು.

Mulki-22091701

Comments

comments

Comments are closed.

Read previous post:
Kinnigoli-21071706
ಕಟೀಲು ಯಾತ್ರಿ ನಿವಾಸ ಉದ್ಘಾಟನೆ

ಕಿನ್ನಿಗೋಳಿ : ಕಟೀಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸರಕಾರದ ಮಟ್ಟದಲ್ಲಿ ಇನ್ನೂ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು. ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಮುಲ್ಕಿ ಮೂಡಬಿದಿರೆ...

Close