ಬಳ್ಕುಂಜೆ ದಂತ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ನಿಯಮಿತ ಪೌಷ್ಟಿಕ ಆಹಾರ ಹಾಗೂ ನಿಯಮಿತ ಆರೋಗ್ಯ ತಪಾಸಣೆಯಿಂದ ಮನುಷ್ಯನ ಆರೋಗ್ಯ ಸಧೃಡವಾಗಿರುತ್ತದೆ. ಉಚಿತ ಶಿಬಿರಗಳಿಂದ ಗ್ರಾಮೀಣ ಪ್ರದೇಶದ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಳ್ಕುಂಜೆ ಚರ್ಚ್ ಧರ್ಮಗುರು ರೆ.ಫಾ. ಮ್ಯೆಕಲ್ ಡಿಸಿಲ್ವ ಹೇಳಿದರು.
ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ಕಿನ್ನಿಗೋಳಿ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯ ನಿಟ್ಟೆ ವಿಶ್ವವಿದ್ಯಾನಿಲಯ ಮಂಗಳೂರು ಮತ್ತು ಬಳ್ಕುಂಜೆ ಐಸಿವ್ಯೆಎಂ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬಳ್ಕುಂಜೆ ಚರ್ಚ್ ಹಾಲ್‌ನಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಸಿ ಮಾತನಾಡಿದರು.
ಮಂಗಳೂರು ಎ ಬಿ ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ಡಾ. ದಿಶಾ ದಂತ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ, ರೆ.ಫಾ. ಡೆನಿಸ್ ಮೆನೇಜಸ್ ಬಳ್ಕುಂಜೆ ಐಸಿವ್ಯೆಎಂ ಅಧ್ಯಕ್ಷೆ ವೆನಿಸಾ ವನಿಸ್ಸಾ ಡಿ ಸೋಜಾ, ಬಳ್ಕುಂಜೆ ಹಾಲು ಉತ್ಪಾದಕರ ಸೇವಾ ಸಂಘದ ಅಧ್ಯಕ್ಷೆ ಮಮತಾ ಪೂಂಜ, ಎ.ಬಿ ಶೆಟ್ಟಿ ವೆಂಕಟರಮಣ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ಪಿಆರ್‌ಒ ಸೀತಾರಾಮ ಶೆಟ್ಟಿ ಎಳತ್ತೂರು ವಂದಿಸಿದರು. ಶಿಕ್ಷಕಿ ಅನಿತಾ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.

Kateel240917014 Kateel240917015

Comments

comments

Comments are closed.