ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ

ಕಿನ್ನಿಗೋಳಿ: ಸಾಮಾಜಿಕ ಅರಿವು ಹಾಗೂ ಸೇವಾ ಬದುಕಿನ ಜೀವನ ಸಾಗಿಸಲು ರಾಷ್ಟ್ರೀಯ ಸೇವಾ ಯೋಜನೆಯ ಕೆಲಸ ಕಾರ್ಯಗಳು ಸಹಾಯವಾಗುತ್ತದೆ. ಎಂದು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕೇಶವ ಕಟೀಲು ಹೇಳಿದರು. ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯಲ್ಲಿ ಮಾತನಾಡಿದರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲೆರೆನ್ಸ್ ಮಿರಾಂದರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜ ಮುಖಿ ಚಿಂತನೆಗಳು ವಿದ್ಯಾರ್ಥಿಗಳನ್ನು ಪ್ರಾಜ್ಞರನ್ನಾಗಿಸುತ್ತದೆ ಎಂದರು.
ಬೆಳಿಗ್ಗೆ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರಾ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಜಾಗೃತಿಗೊಳಿಸಿ ಉತ್ತಮ ನಾಗರೀಕರನ್ನಾಗಿಸಲು ಸಹಕಾರಿ ಎಂದರು.
ಈ ಸಂದರ್ಭ ಸಹಯೋಜನಾಧಿಕಾರಿಗಳಾದ ಯೋಗೀಂದ್ರ ಬಿ. ಹಾಗೂ ಸಿಲ್ವಿಯ ಪಾಯ್ಸ್ ಉಪಸ್ಥಿತರಿದ್ದರು.
ದಿಯಾ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಡಾ. ವಿಕ್ಟರ್ ವಾಜ್ ಇ. ವಂದಿಸಿದರು. ಗ್ಲೆನಿಶ ಹಾಗೂ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಸಂಸಾರ ತತ್ತ್ಂಡ ಸಸಾರ ಎಂಬ ತುಳು ನಾಟಕವನ್ನು ಪ್ರದರ್ಶಿಸಿದರು.

Kateel240917016

Comments

comments

Comments are closed.

Read previous post:
Kateel240917014
ಬಳ್ಕುಂಜೆ ದಂತ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ನಿಯಮಿತ ಪೌಷ್ಟಿಕ ಆಹಾರ ಹಾಗೂ ನಿಯಮಿತ ಆರೋಗ್ಯ ತಪಾಸಣೆಯಿಂದ ಮನುಷ್ಯನ ಆರೋಗ್ಯ ಸಧೃಡವಾಗಿರುತ್ತದೆ. ಉಚಿತ ಶಿಬಿರಗಳಿಂದ ಗ್ರಾಮೀಣ ಪ್ರದೇಶದ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಳ್ಕುಂಜೆ ಚರ್ಚ್ ಧರ್ಮಗುರು...

Close