ಕಿನ್ನಿಗೋಳಿ ವ್ಯ. ಸೇ. ಸ ಬ್ಯಾಂಕ್ ಮಹಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾ ಸಭೆ ಬ್ಯಾಂಕ್‌ನ ಅಧ್ಯಕ್ಷ ಕೆ. ಲವ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇಕಾರ ಸೌಧದಲ್ಲಿ ಭಾನುವಾರ ನಡೆಯಿತು.
ಪ್ರಸ್ತುತ 6496 ಮೆಂಬರರಿದ್ದು 16858040 ರೂ ಪಾಲು ಬಂಡವಾಳವಿದೆ. ಪಾಲು ಬಂಡವಾಳದಲ್ಲಿ ಶೇ. 24.36 ರಷ್ಟು ವೃದ್ಧಿಯಾಗಿರುತ್ತದೆ. ಠೇವಣಿ ಮೊತ್ತ ಹಿಂದಿನ ವರ್ಷಕ್ಕಿಂತ ಶೇ.8.15 ರಷ್ಟು ವೃದ್ಧಿಯಾಗಿರುತ್ತದೆ. ಸರ್ಕಾರಿ ಆದೇಶದಂತೆ ಕೃಷಿಕರಿಗೆ ಬೆಳೆಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲ ನೀಡಲಾಗುತ್ತಿದೆ. ಕಾರ್ಯಕ್ಷೇತ್ರದ ಶಾಲೆಗಳಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಗಿದೆ. ಜನತಾ ನಿತ್ಯ ನಿಧಿ(ಪಿಗ್ಮಿ)ಯನ್ನು ಯಶಸ್ವಿಯಾಗಿ ನಡೆಯುತ್ತಿದೆ. ಸುಮಾರು 200 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ವರದಿ ವರ್ಷದಲ್ಲಿ 8109000 ರೂ. ಸಾಲ ವಿತರಿಸಲಾಗಿದೆ. ಬ್ಯಾಂಕ್ 7635277 ರೂ. ನಿವ್ವಳ ಲಾಭ ಹಾಗೂ ಮಾರಾಟ ವಿಭಾಗದಲ್ಲಿ 607917 ರೂ. ಲಾಭ ಗಳಿಸಿದೆ. ಮೆಂಬರುಗಳಿಗೆ 16% ಡಿವಿಡೆಂಟ್ ನೀಡಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದ ಸಿಸಿ ಟೀವಿ ಅಲ್ಲದೆ ಬ್ಯಾಂಕಿನ ವ್ಯವಹಾರವನ್ನು 100% ಗಣಕೀಕರಣ ಮಾಡಲಾಗಿದೆ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖರ ಮಾಡ ವಾರ್ಷಿಕ ವರದಿಯಲ್ಲಿ ಹೇಳಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ನಿರ್ದೇಶಕರಾದ ರಘುರಾಮ ಅಡ್ಯಂತಾಯ, ಪುರಂದರ ಎಂ. ಶೆಟ್ಟಿ, ಪ್ರವೀಣ್ ಮಾಡ, ಲೋಕಯ್ಯ ಸಾಲ್ಯಾನ್, ನಾರಾಯಣ ಕುಂದರ್, ವನಜ ಎಸ್. ಶೆಟ್ಟಿ, ಮಾರ್ಗರೇಟ್ ವಾಸ್, ಶೀನ ಎಂ., ಶೇಷರಾಮ ಶೆಟ್ಟಿ ಉಪಸ್ಥಿತರಿದ್ದರು.
2017-18 ನೇ ಸಾಲಿನಲ್ಲಿ ೫ಕೋಟಿ ಠೇವಣಿ ಸಂಗ್ರಹ ಮಾಡುವುದು ಹಾಗೂ ಅಷ್ಟೆ ಮೊತ್ತ ಸಾಲ ನೀಡುವುದು, ಸ್ವಸಹಾಯ ಗುಂಪುಗಳನ್ನು ಬಲಪಡಿಸಿ ಅರ್ಹ ಗುಂಪುಗಳಿಗೆ ಸಾಲ ವಿತರಣೆ, ಎಲ್ಲಾ ರೈತ ವರ್ಗದ ಸದಸ್ಯರಿಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಿ ಸಾಲ ನೀಡುವುದು. ಎಂದು ತೀರ್ಮಾನ ಮಾಡಲಾಯಿತು.

Kinnigoli25091704

Comments

comments

Comments are closed.

Read previous post:
Kinnigoli25091701
ಕಿನ್ನಿಗೋಳಿ ಚರ್ಚ್ : ಹೊಸ ಶಿಲುಬೆ ಮೆರವಣಿಗೆ

ಕಿನ್ನಿಗೋಳಿ :  ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಇದರ ನವೀಕೃತ ಕಟ್ಟಡದ ಉದ್ಘಾಟನೆ ಅಕ್ಟೋಬರ್ 15 ರಂದು ನಡೆಯಲಿದ್ದು ಆ ಪ್ರಯುಕ್ತ ಚರ್ಚಿನ ದಿವ್ಯ ಬಲಿ ಪೀಠಕ್ಕೆ ನೂತನವಗಿ ನಿರ್ಮಿಸಲಾದ...

Close