ಕಟೀಲು – ಎನ್.ಎಸ್.ಎಸ್. ದಿನಾಚರಣೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಎನ್.ಎಸ್.ಎಸ್. ದಿನಾಚರಣೆ ಆಚರಿಸಲಾಯಿತು.
ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಪ್ರಬಂಧಕರಾದ ಜಿ.ವಿ.ಭಟ್, ವಿದ್ಯಾರ್ಥಿ ದೆಸೆಯಲ್ಲಿ ಎನ್.ಎಸ್.ಎಸ್. ಒಂದು ಸುವರ್ಣ ಅವಕಾಶ . ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆ. ಸಮಾಜ ಸೇವೆ ಯಾವುದೇ ರೂಪದಲ್ಲೂ ಇರಬಹುದು. ವಯಸ್ಸಾದವರಿಗೆ ರಸ್ತೆ ದಾಟಲು ಮಾಡುವ ಸಹಾಯ, ಬರೆಯಲು ಆಗದವರಿಗೆ ಅರ್ಜಿ ಭರ್ತಿ ಮಾಡಿಕೊಡುವುದು, ಆಧಾರ್ ಕಾರ್ಡ್‌ನಂತಹದ್ದನ್ನು ಮಾಡಿಸಲು ಸಹಾಯ ಮಾಡುವುದು ಹೀಗೆ ಹತ್ತಾರು ಮಾರ್ಗಗಳಿವೆ. ಇವುಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಾಗ ಸಿಗುವ ತೃಪ್ತಿ ಅದ್ಭುತವಾದದ್ದು. ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗ ಎನ್.ಎಸ್.ಎಸ್.ನ ಉಪಯೋಗ ಸಾರ್ಥಕವಾಗುವುದು ಎಂದರು. ಉಪಪ್ರಾಂಶುಪಾಲರಾದ ಪ್ರೊ.ಸುರೇಶ್, ಎನ್.ಎಸ್.ಎಸ್. ನ ಅಧಿಕಾರಿಗಳಾದ ಡಾ.ಗಣಪತಿ ಭಟ್, ಪ್ರೊ.ಪರಮೇಶ್ವರ್ ಸಿ.ಎಚ್. ಉಪಸ್ಥಿತರಿದ್ದರು. ಕೃತ್ತಿಕಾ ಸ್ವಾಗತಿಸಿದರು. ಕುಮಾರಿ ವನಿತ ವಂದಿಸಿದರು. ಕಿರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರ ಕಟೀಲಿನ ದೇವಳದ ಹತ್ತಿರವಿರುವ ಕುದ್ರು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಶ್ರಮದಾನ ಕೈಗೊಳ್ಳಲಾಯಿತು. ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Kinnigoli-26091705

Comments

comments

Comments are closed.

Read previous post:
Kateel-25091702
ಲಲಿತ ಪಂಚಮಿ : ದೇವರ ಶೇಷ ವಸ್ತ್ರ ವಿತರಣೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಲಲಿತ ಪಂಚಮಿ ಪ್ರಯುಕ್ತ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರಗಳನ್ನು ವಿತರಿಸಲಾಯಿತು, ಸುಮಾರು 20 ಸಾವಿರದಷ್ಟು ಶೇಷ ವಸ್ತ್ರ ವಿತರಣೆಗೆ...

Close