ಕಿನ್ನಿಗೋಳಿ : ಶಾರದಾ ದೇವರ ಪ್ರತಿಷ್ಠೆ

ಕಿನ್ನಿಗೋಳಿ: ಕಿನ್ನಿಗೋಳಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ನಡೆಯುವ 2ನೇ ವರ್ಷದ ಶಾರದಾ ಮಹೋತ್ಸವದ ಅಂಗವಾಗಿ ಶಾರದಾ ದೇವರ ಪ್ರತಿಷ್ಠೆ ಬುಧವಾರ ನಡೆಯಿತು.
ಸುರಗಿರಿ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಕಿನ್ನಿಗೋಳಿ ಶ್ರೀರಾಮ ಮಂದಿರ ಅರ್ಚಕ ಗಿರೀಶ್ ಭಟ್, ಕಿನ್ನಿಗೋಳಿ ಜಿಎಸ್‌ಬಿ ಅಸೋಸಿಯೇಶನ್ ಕಾರ್ಯದರ್ಶಿ ಎಸ್. ವಿ. ಶೆಣೈ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ನಿವೃತ್ತ ಶಿಕ್ಷಕಿ ಗಾಯತ್ರೀ ಎಸ್. ಉಡುಪ, ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಸೇಸಪ್ಪ ಸಾಲ್ಯಾನ್, ಶಾರದೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಕಾರ್ಯದರ್ಶಿ ಕೃಷ್ಣ ಕುಂದರ್, ಕೋಶಾಧಿಕಾರಿ ಶ್ರೀನಿವಾಸ ಶೆಣೈ, ನವೀನ್ ಪೂಜಾರಿ, ಪ್ರತೀಕ್ ಶೆಟ್ಟಿ, ಸೂರಜ್ ಕೊಂಡೇಲ, ವಿನಾಯಕ ಶೆಣೈ ಮುಂತಾದವರಿದ್ದರು.
ಬುಧವಾರ ಯಕ್ಷಲಹರಿಯ ವತಿಯಿಂದ ತಾಳಮದ್ದಲೆ ಇಂದ್ರಜಿತು ಕಾಳಗ, ಕಿನ್ನಿಗೋಳಿ ಮಹಿಳಾ ಮಂಡಳಿಯವರಿಂದ ವೈವಿಧ್ಯಮಯ ಕಾರ‍್ಯಕ್ರಮಗಳು ನಡೆದವು.
ಇಂದು ಗುರುವಾರ ಬೆಳಿಗ್ಗೆ ಕಲ್ಲಡ್ಕ ವಿಠಲ ನಾಯಕ್ ತಂಡದಿಂದ ಗೀತ ಸಾಹಿತ್ಯ ಸಂಭ್ರಮ, ಸಂಜೆ ಪ್ರಕಾಶ ಆಚಾರ‍್ಯ ಬಳಗದವರಿಂದ ಭಕ್ತಿರಸಮಂಜರಿ, ಕಾಸರಗೋಡು ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟದವರಿಂದ ದೇವೀ ಮಾಹಾತ್ಮ್ಯೆ ಬೊಂಬೆಯಾಟ, ತಾ. 29ರ ಶುಕ್ರವಾರ ಎಕ್ಕಾರು ದುರ್ಗಾ ಲೇ ಡೀಸ್ ಕ್ಲಬ್‌ನವರಿಂದ ಮಹಿಷಾಸುರ ಮರ್ಧಿನಿ ನೃತ್ಯರೂಪಕ, ಮಹಿಳೆಯರಿಂದ ಲಲಿತಾ ಸಹಸ್ರ ನಾಮ ಪಾರಾಯಣ, ಲೋಲಾಕ್ಷ ಜಾದೂ ಪ್ರದರ್ಶನ, ತಾ.30ರಂದು ಸ್ವರಾಂಜಲಿ ತಂಡದಿಂದ ಭಕ್ತಭಾವ ಸಂಗಮ, ಭರತಾಂಜಲಿ ಕಿನ್ನಿಗೋಳಿ ತಂಡದಿಂದ ನೃತ್ಯ ವೈವಿಧ್ಯ, ರಿಧಂ ಸುರತ್ಕಲ್ ತಂಡದಿಂದ ತುಳುನಾಡ ಪೊರ‍್ಲು ತಿರ‍್ಲು ನಡೆಯಲಿದ್ದು, ತಾ. 1 ಆದಿತ್ಯವಾರ ಸಂಜೆ 4ಗಂಟೆಗೆ ಶ್ರೀ ಶಾರದಾ ಮೂರ್ತಿಯ ಶೋಭಾಯಾತ್ರೆ ಕಟೀಲಿನ ನಂದಿನೀ ನದಿಯಲ್ಲಿ ವಿಸರ್ಜನೆ ನಡೆಯಲಿದೆ.

Kinnigoli-27091703 Kinnigoli-27091704 Kinnigoli-27091705 Kinnigoli-27091706 Kinnigoli-27091707 Kinnigoli-27091708 Kinnigoli-27091709 Kinnigoli-270917010 Kinnigoli-270917011

Comments

comments

Comments are closed.

Read previous post:
Kinnigoli-27091702
ಶಮಂತ್ ರೈ.ಬಿ : ಪಿಎಚ್‌ಡಿ ಪದವಿ

ಕಿನ್ನಿಗೋಳಿ: ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಶಮಂತ್ ರೈ.ಬಿ ಅವರಿಗೆ ಅಲಹಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫೊಮೇರ್ಶನ್ ಟೆಕ್ನೋಜಿಸ್ ಸಂಸ್ಥೆ ಪಿ.ಎಚ್.ಡಿ ಪದವಿ...

Close