ಮೂಲ್ಕಿ: ಪ್ರತಿಭಾ ಪುರಸ್ಕಾರ

ಮೂಲ್ಕಿ: ವಿದ್ಯಾದಾನವು ಬಹು ಶ್ರೇಷ್ಠದಾನವಾಗಿದ್ದು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಮಾದರಿಯಾಗಿದೆ ಎಂದು ವಿಜಯಾ ಬ್ಯಾಂಕ್ ಮೂಲ್ಕಿ ಶಾಖಾ ಪ್ರಭಂದಕರಾದ ದಿವ್ಯಾ ನಾಯಕ್ ಹೇಳಿದರು.
ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಇವರ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ಮೂಲ್ಕಿ ಜಿ.ಎಸ್.ಬಿ ಸಭಾಗ್ರಹದಲ್ಲಿ ನಡೆದ ಪ್ರತಿಭಾಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವ ಧ್ಯೇಯ ಧೋರಣೆಯಿಂದ ಕಲಿಕಾ ಪುರಸ್ಕಾರ ನೀಡುವ ಕಾರ್ಯ ಅಭಿನಂದನೀಯವಾಗಿದ್ದು ಪ್ರತಿಭಾ ಪುರಸ್ಕಾರ ಗಳಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಗಳಿಕೆಯತ್ತ ತಮ್ಮ ಗುರಿಯನ್ನು ವಿಸ್ತರಿಸಬೇಕು ಇನ್ನಿತರ ವಿದ್ಯಾರ್ಥಿಗಳು ಮುಂದಿನ ವರ್ಷ ತಾವೂ ಪ್ರತಿಭಾ ಪುರಸ್ಕಾರ ಗಳಿಸುವಂತೆ ಶೈಕ್ಷಣಿಕ ಪ್ರತಿಭಾವಂತರಾಗಬೇಕು ಎಂದರು. ಈ ಸಂದರ್ಭ ಮೂಲ್ಕಿ ಪೋಲೀಸ್ ನಿರೀಕ್ಷಕ ಅನಂತ ಪದ್ಮನಾಭ ರವರನ್ನು ಜಿ.ಎಸ್.ಬಿ ಸಭಾ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿ, ಜೀವನದಲ್ಲಿ ಶಾಂತಿ ಸುವ್ಯವಸ್ಥಿತ ಬದುಕಿಗಾಗಿ ಕಾನೂನು ಪಾಲನೆ ಬಹಳ ಮುಖ್ಯವಾಗಿದೆ ಸಮಾಜದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಸಾರ್ವಜನಿಕರು ಪೋಲೀಸ್ ಇಲಾಖೆಯೊಂದಿಗೆ ಸಹಕರಿಸುವುದು ಬಹಳ ಅಗತ್ಯವಾಗಿದೆ. ಪೋಲೀಸ್ ವ್ಯವಸ್ಥೆ ಇಂದು ಜನಸ್ನೇಹಿಯಾಗಿದ್ದು ಯಾವುದೇ ಭಯವಿಲ್ಲದೆ ಪೋಲೀಸರನ್ನು ಭೇಟಿಯಾಗಿ ಸಹಾಯ ಪಡೆಯಬಹುದು ಎಂದರು.
ಈ ಸಂದರ್ಭ ಹಿರಿಯ ಸಾಧಕರಾದ ಅನಿಲ್ ಭಟ್ ಶ್ರೀ ವೀರ ಮಾರುತಿ ದೇವಸ್ಥಾನ ಕೋಟೆಕೇರಿ ಮೂಲ್ಕಿ, ಪಾಂಡುರಂಗ ಕಾಮತ್ ಮೊಲೊಟ್ಟು, ಕೈಗಾರಿಕೋದ್ಯಮಿ ರಾಘವೇಂದ್ರ ಕಾಮತ್ ಕೆ.ಎಸ್.ರಾವ್ ನಗರ, ಉದ್ಯಮಿ ಮೂಲ್ಕಿ ಸಂಪಿಗೆ ಮನೆ ಪ್ರಮೋದ್ ಭಟ್ (ಬದ್ರಿ ಭಟ್), ಶಿಕ್ಷಕಿ ಕಾಮಾಕ್ಷಿ ನಾಯಕ್ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆ ಮೂಲ್ಕಿ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ 34 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವರ ಹೆತ್ತವರೊಂದಿಗೆ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿ.ಎಸ್.ಬಿ ಸಭಾದ ಅಧ್ಯಕ್ಷ ಕೆ.ನಾರಾಯಣ ಶೆಣೈ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ವಿ.ವಿನೋದ್.ಡಿ.ಕಾಮತ್, ಮೂಲ್ಕಿ ಸಭಾಗೃಹದ ಅಧ್ಯಕ್ಷರಾದ ವಿ.ವಿಶ್ವನಾಥ ಕಾಮತ್, ಉಪಸ್ಥಿತರಿದ್ದರು ಸಭಾದ ಸಾಂಸ್ಕೃತಿಕ ಸಂಯೋಜಕರಾದ ವಿ.ಸತೀಶ್ ಕಾಮತ್ ಸ್ವಾಗತಿಸಿದರು.ಕಾರ್ಯದರ್ಶಿ ಸತ್ಯೇಂದ್ರ ಶೆಣೈಯವರು ವಂದಿಸಿದರು ವಿ.ಸತೀಶ್ ಕಾಮತ್‌ರವರು ಕಾರ್ಯಕ್ರಮವನ್ನು
ನಿರೂಪಿಸಿದರು.

Kinnigoli-27091706

Comments

comments

Comments are closed.

Read previous post:
Kinnigoli-260917030
ಕೊಡೆತ್ತೂರು ನವರಾತ್ರಿ ಉತ್ಸವ

ಕಿನ್ನಿಗೋಳಿ: ನವರಾತ್ರಿ ಲಲಿತಾ ಪಂಚಮಿ ಪ್ರಯುಕ್ತ ಗುರುವಾರ ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ 53ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಟ್ಯಾಬ್ಲೊಗಳು ಹಾಗೂ...

Close