ಸುಧಾಕರ ಸಾಲ್ಯಾನ್ ಆಯ್ಕೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಸದಸ್ಯರಾಗಿ ಐಕಳ ಗ್ರಾಮ ಪಂಚಾಯಿತಿ ಸದಸ್ಯ, ರಂಗನಟ ಸುಧಾಕರ ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ, ಹಾಲಿ ಶಾಸಕ ಕೆ.ಅಭಯಚಂದ್ರ ಜೈನ್‌ರ ಶಿಪಾರಸಿನ ಮೇರೆಗೆ ಜಿಲ್ಲಾ ಧ್ಯಕ್ಷರು ಹಾಗೂ ರಾಜ್ಯದ ಕಾಂಗ್ರೆಸ್‌ನ ವರಿಷ್ಠರು ಈ ಆಯ್ಕೆ ನಡೆಸಿದ್ದಾರೆ.
ಪ್ರಸಿದ್ಧ ರಂಗ ಕಲಾವಿದರಾಗಿರುವ ಇವರು ಸುಮಾರು 30 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ಅಭಿನಯಿಸಿದ್ದಾರೆ. ಬಲೇ ತೆಲಿಪಾಲೆ ಖ್ಯಾತಿಯ ಹಾಸ್ಯ ಕಲಾವಿದರಾಗಿರುವ ಸುಧಾಕರ್ ಹಲವು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕಿನ್ನಿಗೋಳಿಯ ವಿಜಯಾ ಕಲಾವಿದರ ನಿರ್ವಾಹಕರಾಗಿ 20 ವರ್ಷಗಳಿಂದ ಸೇವೆ ಸಲ್ಲಿಸಿ ತಂಡದ ಜತೆ ಮುಂಬಾಯಿ, ಬೆಂಗಳೂರು, ಮೈಸೂರು, ಸೂರತ್ ಮತ್ತಿನ್ನಿತರ ಕಡೆ ರಂಗ ನಿರ್ವಹಣೆ ನಡೆಸಿದ್ದಾರೆ. ಕಿನ್ನಿಗೋಳಿ ರೋಟರ‍್ಯಾಕ್ಟ್‌ನ ಮಾಜಿ ಅಧ್ಯಕ್ಷರಾಗಿ, ಮಾಜಿ ವಲಯ ಪ್ರತಿನಿಧಿಯಾಗಿ, ಏಳಿಂಜೆ ಪೆರ್ಗುಂಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸಾಮಾಜಿಕ ಹಾಗೂ ಧಾರ್ಮಿಕ ರಂಗಗಳಲ್ಲಿ ಜನಪ್ರಿಯರಾಗಿದ್ದಾರೆ.

Kinnigoli-27091701

Comments

comments

Comments are closed.

Read previous post:
Kinnigoli-27091706
ಮೂಲ್ಕಿ: ಪ್ರತಿಭಾ ಪುರಸ್ಕಾರ

ಮೂಲ್ಕಿ: ವಿದ್ಯಾದಾನವು ಬಹು ಶ್ರೇಷ್ಠದಾನವಾಗಿದ್ದು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಮಾದರಿಯಾಗಿದೆ ಎಂದು ವಿಜಯಾ ಬ್ಯಾಂಕ್ ಮೂಲ್ಕಿ ಶಾಖಾ ಪ್ರಭಂದಕರಾದ ದಿವ್ಯಾ ನಾಯಕ್ ಹೇಳಿದರು. ಮೂಲ್ಕಿ ಗೌಡ...

Close