ಉಳೆಪಾಡಿ ಶರನ್ನವರಾತ್ರಿ ಧಾರ್ಮಿಕ ಸಭೆ

ಕಿನ್ನಿಗೋಳಿ: ನಮ್ಮ ನಾಡಿನ ನುಡಿ ಸಂಸ್ಕ್ರತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕು ನಾಡಿನ ಅಭ್ಯುದಯ ಹಾಗೂ ಅಭಿವೃದ್ಧಿಗಾಗಿ ಬದ್ದರಾಗಿರಬೇಕು ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಳದಲ್ಲಿ ಶುಕ್ರವಾರ ನಡೆದ ಶರನ್ನವರಾತ್ರಿ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ನ್ಯಾಯವಾದಿ ಕೆ. ಶಂಭು ಶರ್ಮ ಹಾಗೂ ಮಂಗಳೂರು ಯುವಜನ ಸೇವಾ ಸಂಘದ ಅಧ್ಯಕ್ಷ ತುಕಾರಾಂ ಬಂಗೇರ ದಂಪತಿಯರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಕಸಾಪ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದ್ಯಮಿ ವಿರಾರ್ ಶಂಕರ ಶೆಟ್ಟಿ , ಸುಧಾಕರ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಶ್ರೀಮತಿ ಮೋಹನದಾಸ ಸುರತ್ಕಲ್, ಕರುಣಾಕರ ರೈ ಮಂಗಳೂರುರು ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶರನ್ನವರಾತ್ರಿ ಆರಾಧನೆ ಪ್ರಯುಕ್ತ ಸಾಮೂಹಿಕ ಚಂಡಿಕಾ ಯಾಗ ನಡೆಯಿತು.

Kinnigoli-30091701

Comments

comments

Comments are closed.

Read previous post:
Kinnigoli-291707
ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಹಾನವಮಿ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಹಾನವಮಿ ಪ್ರಯುಕ್ತ ಭಕ್ತರಿಗೆ ಮೂಡೆಯನ್ನು ಪ್ರಸಾದ ರೂಪವಾಗಿ ನೀಡಲು ಬಂದವನ್ನು (ಹಿಟ್ಟು) ದೋಣಿಯಲ್ಲಿ ಇಟ್ಟಿರುವುದು.

Close