ಹಿಂದೂ ರುದ್ರಭೂಮಿ ಉದ್ಘಾಟನೆ

ಕಿನ್ನಿಗೋಳಿ: ಸರಕಾರ, ಸಂಘ ಸಂಸ್ಥೆಗಳು ಹಾಗೂ ಊರ ಮಹನೀಯರು ಸಮಾಜ ಮುಖಿ ಕಾರ್ಯಗಳು ಮತ್ತು ಚಿಂತನೆಗಳಿಗೆ ಒಗ್ಗೂಡಿ ಶ್ರಮಿಸಿದಾಗ ಸಮಾಜ ಅಭಿವೃದ್ಧಿ ಪಥದತ್ತ ಸಾಗುವುದು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ ಅತ್ತೂರು-ಕಾಫಿಕಾಡು ಇದರ ಆಶ್ರಯದಲ್ಲಿ ಭಾನುವಾರ ಕೆಮ್ರಾಲ್ ಸರಕಾರಿ ಆಸ್ಪತ್ರೆಯ ಬಳಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ನೂತನ ರುದ್ರಭೂಮಿಯ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಬೊಳ್ಳೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಸುರಗಿರಿ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ಯೋಜನಾಧಿಕಾರಿ ಉಮರಬ್ಬ, ಉದ್ಯಮಿ ಸುರೇಶ್ ರಾವ್, ಕಾಫಿಕಾಡು ಶ್ರೀ ಕೋರ‍್ದಬ್ಬು ದೈವಸ್ಥಾನದ ಆಡಳಿತ ಮೊಕ್ತೇಸರ ಶೀನ ಸ್ವಾಮಿ, ಕೊಕುಡೆ ಶ್ರೀ ಹರಿಪಾದ ದೈವಸ್ಥಾನದ ನಾರಾಯಣ ಕೋಟ್ಯಾನ್ ಭಂಡಾರಮನೆ, ಹಿಂದೂ ರುದ್ರಭೂಮಿ ಸಮಿತಿಯ ಗೌರವಾಧ್ಯಕ್ಷ ಪಂಜದಗುತ್ತು ಶಾಂತರಾಮ ಶೆಟ್ಟಿ, ಕೋಶಾಧಿಕಾರಿ ಪಿ.ಕೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷ ಪಂಜ ವಾಸುದೇವ ಭಟ್ ಸ್ವಾಗತಿಸಿದರು. ಧನಂಜಯ ಶೆಟ್ಟಿಗಾರ್ ಪ್ರಸ್ತಾವನೆಗೈದರು. ಜಯಾನಂದ ಎನ್. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli-021017025 Kinnigoli-021017026 Kinnigoli-021017027

Comments

comments

Comments are closed.

Read previous post:
Kinnigoli-011017024
ಶ್ರೀ ಶಾರದಾ ಮಹೋತ್ಸವ ಶೋಭಾ ಯಾತ್ರೆ

ಕಿನ್ನಿಗೋಳಿ: ಕಿನ್ನಿಗೋಳಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ದ್ವಿತೀಯ ವರ್ಷದ ಶ್ರೀ ಶಾರದಾ ಮಹೋತ್ಸವ ಶೋಭಾಯಾತ್ರೆ ಭಾನುವಾರ ನಡೆಯಿತು.

Close