ಹಳೆಯಂಗಡಿ: ರಕ್ತದಾನ ಶಿಬಿರ

ಹಳೆಯಂಗಡಿ: ಅನ್ನದಾನ, ವಿದ್ಯಾದಾನದಂತೆ ರಕ್ತದಾನ ಅತ್ಯಂತ ಶ್ರೇಷ್ಟ ದಾನ. ರಕ್ತದಾನದಿಂದ ಅನೇಕರ ಜೀವ ಉಳಿಸುವ ಮೂಲಕ ಕತ್ತಲೆ ತುಂಬಿದ ಜೀವಕ್ಕೆ ಬೆಳಕಾಗುವ ಎಂದು ಹಳೆಯಂಗಡಿ ಸಿ.ಎಸ್.ಐ ಅಮ್ಮನ್ ಮೆಮೋರಿಯಲ್ ಚರ್ಚ್ ಸಭಾಪಾಲ ರೆ.ಸೆಬೆಸ್ಟಿನ್ ಜತ್ತನ್ ಹೇಳಿದರು.
ಲಿಯೋ ಮತ್ತು ಲಯನ್ಸ್ ಕ್ಲಬ್ ಹಳೆಯಂಗಡಿ, ರೇ. ಜೋರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಹಳೆಯಂಗಡಿ ಇವರ ಸಾರಥ್ಯದಲ್ಲಿ ಹೆಲ್ತ್ ಕೇರ್ ಡಯಾಗೋಸ್ಟಿಕ್ ಸೆಂಟರ್ ಹಾಗೂ ಕೆ.ಎಂ.ಸಿ ಅಸ್ಪತ್ರೆ ಮಂಗಳೂರು ಇದರ ಅಶ್ರಯದಲ್ಲಿ ರೆಡ್ ರಿಬನ್ ಕ್ಲಬ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ, ಯುವಕ ಮಂಡಲ (ರಿ) ಮತ್ತು ಯುವತಿ ಮಹಿಳಾ ಮಂಡಲ (ರಿ) ತೋಕೂರು ಯುವತಿ ಮತ್ತು ಮಹಿಳಾ ಮಂಡಲ (ರಿ)ಹಳೆಯಂಗಡಿ, ಶ್ರೀ ಸುಬ್ರಮಣ್ಯ ಸ್ಪೋರ್ಸ್ ಕ್ಲಬ್ ತೋಕೂರು, ಸಿಕ್ಸರ್ ಎಸೋಶಿಯೇಶನ್ ಕದಿಕೆ, ಯುವವಾಹಿನಿ (ರಿ) ಹಳೆಯಂಗಡಿ ಘಟಕ, ರಿಲಾಯನ್ಸ್ ಎಸೋಸಿಯೇಶನ್ ಬೋಳ್ಳೂರು ಹಳೆಯಂಗಡಿ, ಸಂಗಮ ಮಹಿಳಾ ಮಂಡಲ ಇಂದಿರಾ ನಗರ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ(ರಿ) ಹಳೆಯಂಗಡಿ, ಇವರ ಸಹಯೋಗದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಹಳೆಯಂಗಡಿಯ ಹರಿ ಒಂ ಅಪಾರ್ಟ್ ಮೆಂಟ್ ನ ಸಭಾಭವನದಲ್ಲಿ ರಕ್ತದಾನ ಶಿಬಿರವನ್ನು ಉದ್ಘಟಿಸಿ ಮಾತನಾಡಿದರು,
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅನ್ನದಾನ ಜನರ ಹಸಿವನ್ನು ನೀಗಿಸುತ್ತದೆ, ವಿದ್ಯಾದಾನದಿಂದ ಸ್ವಾಸ್ತ್ಯ ಸಮಾಜದ ನಿರ್ಮಾಣ ಸಾದ್ಯವಾಗುತ್ತದೆ, ರಕ್ತದಾನ ಜೀವವನ್ನು ಉಳಿಸುವ ಕೆಲಸ ಮಾಡುತ್ತದೆ ಆದರಿಂದ ರಕ್ತದಾನ ಮಾಡುವ ವ್ಯಕ್ತಿ ದೇವರಿಗೆ ಸಮಾನವಾಗಿರುತ್ತಾನೆ, ಯುವ ಜನತೆ ಇಂತಹ ಕಾರ್ಯಕ್ರಮದಲ್ಲಿ ಕೈಜೋಡಿಸಿರುದು ಅಬಿನಂದನೀಯ ಎಂದರು.
ಈ ಸಂದರ್ಭ ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮರೊಟ್ಟು, ರೇ. ಜೋರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಜೊರ್ಜ್ ಬೆರ್ನಾಡ್, ಉದಯ ಬೆರ್ನಡ್ , ವಿದ್ಯಾವಿನಾಯಕ ಯುವಕ ಮಂಡಲದ ಕಟ್ಟಡ ಸಮಿತಿ ಗೌರಾವಾಧ್ಯಕ್ಷ ಪ್ರಕಾಶ್ ಶೆಟ್ಟಿ, ವಿವಿಧ ಸಂಘ ಸಂಸ್ಥೆಗಳ ರತನ್ ಶೆಟ್ಟಿ, ಎಚ್ ಅಮೀನ್, ಸುಜಾತ ವಾಸುದೇವ್, ದಿವ್ಯಶ್ರಿ, ಜೋತಿ , ಶಮೀನ್, ಶರತ್, ಚಂದ್ರಶೇಖರ ಕದಿಕೆ, ಅಜೀಜ್ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.
ಮೂಡ ಸದಸ್ಯ ವಸಂತ್ ಬೆರ್ನಾಡ್ ಸ್ವಾಗತಿಸಿ, ಹರಿದಾಸ್ ಭಟ್ ವಂದಿಸಿದರು ಬ್ರಿಜೇಶ್ ಕಾರ್ಯಕ್ರಮ ನಿರೂಪಿಸಿದರು.

Haleyangadi-02101701

Comments

comments

Comments are closed.

Read previous post:
Kinnigoli-021017028
ದಸರಾ- ದೀಪಾವಳಿ ವಿಶೇಷಾಂಕ

ಕಿನ್ನಿಗೋಳಿ : ಪುಸ್ತಕ ಪ್ರಕಾಶನ ಮತ್ತು ಪತ್ರಿಕೋದ್ಯಮದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕಿನ್ನಿಗೋಳಿಯ ಯುಗಪುರುಷ ಪತ್ರಿಕೆ ದೊಡ್ಡ ಕೊಡುಗೆ ನೀಡಿದೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು...

Close