ಯಕ್ಷಕೌಮುದಿ ಮಹಿಳಾ ಸಂಘ ವಾರ್ಷಿಕೋತ್ಸವ

ಕಿನ್ನಿಗೋಳಿ : ಮಹಿಳೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯಲು ಮಹಿಳಾ ಸಂಘಟನೆಯ ಅಗತ್ಯವಿದೆ ನಿಟ್ಟೆ ಎನ್‌ಮ್‌ಎಎಮ್ ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸೋಮವಾರ ಕೆರೆಕಾಡುವಿನಲ್ಲಿ ಯಕ್ಷ ಕೌಮುದಿ ಮಹಿಳಾ ಸಂಘದ ೬ನೇ ವರ್ಷದ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿನಾಯಕ ಯಕ್ಷಕಲಾ ತಂಡದ ಕಾರ್ಯದರ್ಶಿ ರೇಶ್ಮಾ ಜಿ. ಬಂಗೇರ ಮಾತನಾಡಿ ಯಕ್ಷಗಾನ ಕ್ಷೇತ್ರ ಗಂಡಸರಿಗೆ ಮಾತ್ರ ಸೀಮಿತವಾಗಿಲ್ಲ ಹೆಣ್ಣು ಮಕ್ಕಳು ಮಹಿಳೆಯರು ಕೂಡಾ ಕಲಿತು ಸಾಧನೆ ಮಾಡಬಹುದು. ಇಲ್ಲಿನ ಮಕ್ಕಳ ಮೇಳದಲ್ಲಿ ಸುಮಾರು ೨೦ ಹುಡುಗಿಯರು ಯಕ್ಷಗಾನ ಅರ್ಥಗಾರಿಕೆ ವೇಷ ಹಾಕುವುದುನ್ನು ತರಬೇತು ಪಡೆದು ಯಶಸ್ವಿ ಆಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಜಾನಪದ ಕ್ಷೇತ್ರದ ನಾಟಿ ವೈದ್ಯೆ ಸುಮತಿ ಪೂಜಾರಿ ಶಾಂತಿ ನಗರ ಅವರನ್ನು ಸನ್ಮಾನಿಸಲಾಯಿತು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ದಮಯಂತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೇಖಾ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಸಂಘದ ಅಧ್ಯಕ್ಷೆ ಮಲತಾ ಸ್ವಾಗತಿಸಿದರು. ಅನ್ವಿತಾ ಸನ್ಮಾನ ಪತ್ರ ವಾಚಿಸಿದರು. ಪೂಜಾ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದವರಿಂದ ಪಾಂಚಜನ್ಯ ಯಕ್ಷಗಾನ ನಡೆಯಿತು.
Kinnigoli-03101703

Comments

comments

Comments are closed.

Read previous post:
Kinnigoli-03101702
ಭರತಾಂಜಲಿ ನೃತ್ಯೋತ್ಸವ

ಕಿನ್ನಿಗೋಳಿ : ಭಾರತೀಯ ನೃತ್ಯ ಪ್ರಾಕಾರಗಳನ್ನು ಎಳವೆಯಲ್ಲಿಯೇ ಕಲಿಸುವುದರಿಂದ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಕಲೆಯನ್ನು ಬೆಳೆಸಬಹುದು. ಕಲೆಯಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಕೊಲಕಾಡಿ ವಾದಿರಾಜ ಉಪಾಧ್ಯಾಯ...

Close