ಕಿನ್ನಿಗೋಳಿ ಬೃಹತ್ ಗ್ರಾಮ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆ ಪೊಂಪೈ ಕಾಲೇಜು ಐಕಳ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ಕ್ಷೇಮ ಪಾಲನಾ ಪರಿಷತ್ತು, ಐಕಳ ಪೊಂಪೈ ಕಾಲೇಜು ಐಕಳ, ಕಿನ್ನಿಗೋಳಿ, ಮೆನ್ನಬೆಟ್ಟು ಮತ್ತು ಐಕಳ ಗ್ರಾಮ ಪಂಚಾಯಿತಿ, ಯುಗಪುರುಷ, ಕಿನ್ನಿಗೋಳಿ ರೋಟರಿ ಕ್ಲಬ್, ಇನ್ನರ್‌ವೀಲ್ ಕ್ಲಬ್, ಲಯನ್ಸ್ ಕ್ಲಬ್, ಕಿನ್ನಿಗೋಳಿ ರಿಕ್ಷಾ-ಚಾಲಕ ಮಾಲಕರ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ನಡೆದ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ ಕಿನ್ನಿಗೋಳಿ ಪೇಟೆಯಿಂದ ಮೂರುಕಾವೇರಿ ರಾಜ್ಯ ಹೆದ್ದಾರಿ ತನಕ ನಡೆಯಿತು. ಐಕಳ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಕಿನ್ನಿಗೋಳಿ ಪೇಟೆ ಪರಿಸರದ ರಸ್ತೆಯ ಇಕ್ಕೆಲಗಳಲ್ಲಿರುವ ಕಳೆಗಿಡಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಸ್ಚಚ್ಚಗೊಳಿಸಿದರು.
ಹಿರಿಯ ಸಾಹಿತಿ ಕೆ.ಜಿ. ಮಲ್ಯ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ, ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶಿವರಮ ಶೆಟ್ಟಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಾಧಾ ಶೆಣೈ, ಕಿನ್ನಿಗೋಳಿ ರಿಕ್ಷಾ-ಚಾಲಕ ಮಾಲಕರ ಸಂಘದ ಅಧ್ಯಕ್ಷ ಜೇಮ್ಸ್ ಮಾರ್ಟಿಸ್, ಪೊಂಪೈ ಕಾಲೇಜು ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ವಿಕ್ಟರ್ ವಾಜ್ ಇ., ಐಕಳ ಪೊಂಪೈ ಕಾಲೇಜು ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಸಿಲ್ವಿಯ ಪಾಯಸ್, ಕಾಲೇಜು ಕ್ಷೇಮ ಪಾಲನಾ ಅಧಿಕಾರಿ ಜಗದೀಶ ಹೊಳ್ಳ, ಪ್ರೋ. ಯೋಗೀಂದ್ರ ಬಿ. ಮತ್ತಿತರರು ಉಪಸ್ಥಿತರಿದ್ದರು.

Kinnigoli-03101701

Comments

comments

Comments are closed.

Read previous post:
Haleyangadi-02101704
ಸಸಿಹಿತ್ಲು: ಬೀಚ್ ಸ್ವಚ್ಚತಾ ಅಭಿಯಾನ

ಸಸಿಹಿತ್ಲು: ಗಾಂಧಿ ತತ್ವವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಭ್ರಷ್ಟಾಚಾರ, ಜಾತಿ ಮತ್ತು ಧರ್ಮದ ನಡುವಿನ ಅಂತರಗಳನ್ನು ದೂರ ಮಾಡಬಹುದು ಎಂದು ಸಸಿಹಿತ್ಲು ಸಾರಂತಾಯ ಉಳ್ಳಾಯ...

Close