ಮನೆ ಮನೆಗೆ ಕಾಂಗ್ರೆಸ್ ಅಭಿಯಾನ

ಪಡುಪಣಂಬೂರು: ಅಶಕ್ತರ ಅಭಿವೃದ್ಧಿಯೇ ಕಾಂಗ್ರೆಸ್ ನ ಮೂಲ ಮಂತ್ರವಾಗಿದೆ. ನುಡಿದಂತೆ ನಡೆದ ಸಿದ್ಧರಾಮಯ್ಯರ ಸರಕಾರ, ಬಜೆಟ್‌ನಲ್ಲಿ 165 ಯೋಜನೆಗಳನ್ನು ಘೋಷಿಸಿದಂತೆ 160 ಭರವಸೆಗಳನ್ನು ಈಡೇರಿಸಿದೆ ಎಂದು ಕೆ.ಪಿ.ಸಿ.ಸಿ ಸದಸ್ಯ ಎಚ್. ವಸಂತ್ ಬೆರ್ನಾಡ್ ಹೇಳಿದರು.
ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡಿನ ಕೊರಗರ ಕಾಲೋನಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ಇಂದಿರಾಗಾಂಧಿಯ ಅವಧಿಯಿಂದ ಇಂದಿನವರೆಗೂ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ನಡೆದಿದೆ, ಮಹಿಳಾ ಮೀಸಲಾತಿಗಳು ಕಾಂಗ್ರೆಸ್‌ನ ಕೊಡುಗೆ ಆಗಿದೆ ಎಂದರು.
ಜಿಲ್ಲಾ ಪರಿಷತ್‌ನ ಮಾಜಿ ಅಧ್ಯಕ್ಷೆ ಸುಗಂಧಿ ಡಿ. ಕೊಂಡಾಣ, ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸುನೀತಾ ಕಿನ್ನಿಗೋಳಿ, ಮಾಜಿ ಅಧ್ಯಕ್ಷೆ ಮನೋರಮಾ ಹೆನ್ರಿ, ಹಳೆಯಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮನ್ಸೂರ್ ಸಾಗ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಪ್ರಮುಖರಾದ ಸತೀಶ್ ಕೆರೆಕಾಡು, ಉಷಾ, ಪದ್ಮಲತಾ, ಶ್ರೀಕಲಾ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಸ್ವಾಗತಿಸಿದರು. ಪಡುಪಣಂಬೂರು ವಲಯ ಕಾಂಗ್ರೆಸ್ ಅಧ್ಯಕ್ಷೆ ಸವಿತಾ ಶರತ್ ಬೆಳ್ಳಾಯರು ವಂದಿಸಿದರು.

Haleyangadi-02101703

 

Comments

comments

Comments are closed.

Read previous post:
Haleyangadi-02101702
ಮೂಲ್ಕಿ : ಸ್ವಚ್ಚತಾ ಕಾರ್ಯಕ್ರಮ

ಮೂಲ್ಕಿ: ಆರೋಗ್ಯದ ಹಿತ ದೃಷ್ಠಿಯಲ್ಲಿ ಪರಿಸರ ಸಂರಕ್ಷಣೆ ನಾಗರೀಕರೆಲ್ಲರ ಹೊಣೆಯಾಗಿದ್ದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯ ಪ್ರಯುಕ್ತ ವಿವಿಧ ಸಂಘಟನೆಯ ನೇತ್ರತ್ವದಲ್ಲಿ ನಡೆಯುವ ಕಾರ್ಯಕ್ರಮ...

Close