ಸಮಾಜಮುಖಿ ಚಿಂತನೆಗೆ ಪ್ರೋತ್ಸಾಹ

ಕಿನ್ನಿಗೋಳಿ: ಸಮಾಜ ಸೇವಾ ಸಂಸ್ಥೆಗಳು ಸಮಾಜಮುಖಿ ಚಿಂತನೆಯನ್ನು ಮುಕ್ತವಾದ ವಾತಾವರಣದಲ್ಲಿ ಸೇವಾ ಕಾರ್ಯಕ್ರಮಗಳ ಮೂಲಕ ಕೈಗೊಂಡಲ್ಲಿ ಅಂತಹ ಸಂಸ್ಥೆಗಳಿಗೆ ಜನರು ಸಹ ಪ್ರೋತ್ಸಾಹ ನೀಡುತ್ತಾರೆ ಎಂದು 10ನೇ ತೋಕೂರಿನ ಫೇಮಸ್ ಯೂತ್ ಕ್ಲಬ್‌ನ ಗೌರವಾಧ್ಯಕ್ಷ ಗುರುರಾಜ್ ಎಸ್. ಪೂಜಾರಿ ಹೇಳಿದರು.
ತೋಕೂರು ಫೇಮಸ್ ಯೂತ್ ಕ್ಲಬ್‌ನ ಕಾರ್ಯದರ್ಶಿ ಹಾಗೂ ಖಾಸಗಿ ಸಂಸ್ಥೆಯೊಂದರಲ್ಲಿ ಟೈಲರಿಂಗ್ ತರಬೇತಿ ನೀಡುತ್ತಿದ್ದ ಕೆ.ಪಿ.ಜೋಸೆಫ್ ಅವರು ಇತ್ತೀಚೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಅವರ ಚಿಕಿತ್ಸೆಗಾಗಿ ಧನಸಹಾಯವನ್ನು ಕ್ಲಬ್‌ನಿಂದ ಹಸ್ತಾಂತರಿಸಿ ಮಾತನಾಡಿದರು.
ಕ್ಲಬ್‌ನ ಅಧ್ಯಕ್ಷ ಸುಧೀರ್ ಭಂಡಾರಿ, ಮಾರ್ಗದರ್ಶಕರಾದ ಬಶೀರ್ ಕಲ್ಲಾಪು, ರಘುನಾಥ ಸಾಲ್ಯಾನ್, ಲಕ್ಷ್ಮಣ್ ಸಾಲ್ಯಾನ್, ಶರೀಫ್, ಪ್ರಭಾರ ಕಾರ್ಯದರ್ಶಿ ಸುಜಿತ್, ಕೋಶಾಧಿಕಾರಿ ದುರ್ಗಾಪ್ರಸಾದ್, ಸದಸ್ಯರಾದ ವಿಶ್ವಜಿತ್, ಸತ್ಯಜಿತ್, ವಿಷ್ಣುಮೂರ್ತಿ, ಮನೋಜ್ ಉಪಸ್ಥಿತರಿದ್ದರು.

Kinnigoli-03101704

Comments

comments

Comments are closed.

Read previous post:
Kinnigoli-03101703
ಯಕ್ಷಕೌಮುದಿ ಮಹಿಳಾ ಸಂಘ ವಾರ್ಷಿಕೋತ್ಸವ

ಕಿನ್ನಿಗೋಳಿ : ಮಹಿಳೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯಲು ಮಹಿಳಾ ಸಂಘಟನೆಯ ಅಗತ್ಯವಿದೆ ನಿಟ್ಟೆ ಎನ್‌ಮ್‌ಎಎಮ್ ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ಹೇಳಿದರು. ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು...

Close