ಸಂಭ್ರಮ ಕೈಪಿಡಿ ಬಿಡುಗಡೆ

ಕಿನ್ನಿಗೋಳಿ: ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜನಪರ ಸ್ನೇಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದ್ದು ಊರ ಪರವೂರ ಹಾಗೂ ಗ್ರಾಮದ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದೆ. ಇತರ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಜತೋತ್ಸವ ಸಂಭ್ರಮ – 2018 ಉದ್ಘಾಟನಾ ಸಮಾರಂಭ ಮತ್ತು ರಜತೋತ್ಸವ ಸಂಭ್ರಮ ಕೈಪಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿ ಮಾತನಾಡಿ ಪಕ್ಷಿಕೆರೆ ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಿರಂತರವಾಗಿ 24 ವರ್ಷ ಜನರನ್ನು ಸಂಘಟಿಸಿ ಹಿರಿ ಕಿರಿಯರ ಸಲಹೆ ಸಹಕಾರದಿಂದ ಗ್ರಾಮದ ಅಭಿವೃದ್ಧಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಭಾರತ ಪರಿಕ್ರಮಿಗಳಾದ ರವೀಂದ್ರನಾಥ ರೈ ಅತ್ತೂರು ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚಗೈದರು. ದಾರ್ಮಿಕ ಹಿತ ಚಿಂತಕ ಪಂಜ ವಾಸುದೇವ ಭಟ್ ಶುಭಶಂಸನೆಗೈದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಠೇಲ್ ವಾಸುದೇವ ರಾವ್, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಹಳೆಯಂಗಡಿಯ ಉದ್ಯಮಿ ಸೂರ್ಯ ಕುಮಾರ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಬೊಳ್ಳೂರು, ಸಮಿತಿಯ ಗೌರವಾಧ್ಯಕ್ಷ ಪಂಜದ ಗುತ್ತು ಶಾಂತಾರಾಮ ಶೆಟ್ಟಿ ಹಾಗೂ ಸಮಿತಿಯ ಮಾಜಿ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.
ರಜತ ವರ್ಷದ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು. ರಾಮದಾಸ ಶೆಟ್ಡಿ ವಂದಿಸಿದರು. ಉಪನ್ಯಾಸಕ ಜಯಾನಂದ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರಸಿದ್ಧಕಲಾವಿದರ ಕೂಡುವಿಕೆಯಲ್ಲಿ ಯಕ್ಷ-ಗಾನ ವೈಭವ ನಡೆಯಿತು.

Kinnigoli-03101705

Comments

comments

Comments are closed.

Read previous post:
Kinnigoli-03101704
ಸಮಾಜಮುಖಿ ಚಿಂತನೆಗೆ ಪ್ರೋತ್ಸಾಹ

ಕಿನ್ನಿಗೋಳಿ: ಸಮಾಜ ಸೇವಾ ಸಂಸ್ಥೆಗಳು ಸಮಾಜಮುಖಿ ಚಿಂತನೆಯನ್ನು ಮುಕ್ತವಾದ ವಾತಾವರಣದಲ್ಲಿ ಸೇವಾ ಕಾರ್ಯಕ್ರಮಗಳ ಮೂಲಕ ಕೈಗೊಂಡಲ್ಲಿ ಅಂತಹ ಸಂಸ್ಥೆಗಳಿಗೆ ಜನರು ಸಹ ಪ್ರೋತ್ಸಾಹ ನೀಡುತ್ತಾರೆ ಎಂದು 10ನೇ ತೋಕೂರಿನ...

Close