ಸಸಿಹಿತ್ಲು: ಬೀಚ್ ಸ್ವಚ್ಚತಾ ಅಭಿಯಾನ

ಸಸಿಹಿತ್ಲು: ಗಾಂಧಿ ತತ್ವವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಭ್ರಷ್ಟಾಚಾರ, ಜಾತಿ ಮತ್ತು ಧರ್ಮದ ನಡುವಿನ ಅಂತರಗಳನ್ನು ದೂರ ಮಾಡಬಹುದು ಎಂದು ಸಸಿಹಿತ್ಲು ಸಾರಂತಾಯ ಉಳ್ಳಾಯ ದೈವಸ್ಥಾನದ ಅನುವಂಶಿಕ ಮೊಕ್ತೇಸರ ಕಾಂತು ಲಕ್ಕಣ ಗುರಿಕಾರ ಯಾನೆ ಯಾದವ ಜಿ. ಬಂಗೇರ ಹೇಳಿದರು.
ಸಸಿಹಿತ್ಲುವಿನ ಬೀಚ್ ಪರಿಸರದಲ್ಲಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ನಡೆದ ಬೀಚ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಲಜಾ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಮಾತನಾಡಿ, ಸಸಿಹಿತ್ಲುವಿನ ಬೀಚ್ ಪರಿಸರವನ್ನು ಸ್ವಚ್ಚ ಮತ್ತು ಸುಂದರ ಪರಿಸರವನ್ನಾಗಿ ಮಾಡಲು ಹಳೆಯಂಗಡಿ ಗ್ರಾ.ಪಂ. ಸಂಪೂರ್ಣವಾಗಿ ತೊಡಗಿಸಿಕೊಂಡರು, ಪ್ರವಾಸಿಗರ ಹಾಗೂ ನಾಗರಿಕರ ಸಹಕಾರ ಪ್ರಾಮುಖ್ಯವಾಗಿದೆ. ಈ ಬಾರಿ ವಿದ್ಯಾರ್ಥಿ ಶಕ್ತಿಯನ್ನು ಗಾಂಧಿ ಜಯಂತಿಯಂದು ಸ್ವಚ್ಚತೆಯ ಪಾಠದೊಂದಿಗೆ ನಡೆಸಿರುವುದರಿಂದ ಪರಿಣಾಮಕಾರಿಯಾಗಿದೆ ಎಂದರು.
ಹಳೆಯಂಗಡಿ ಗ್ರಾಮ ಪಂಚಾಯತ್, ಬೀಚ್ ಅಭಿವೃದ್ಧಿ ಸಮಿತಿ, ಸುರತ್ಕಲ್‌ನ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು, ಮಂಗಳೂರಿನ ರಾಮಕೃಷ್ಣ ಆಶ್ರಮ, ಜೆ.ಸಿ.ಐ ಮಂಗಳೂರು ಮತ್ತು ಸುರತ್ಕಲ್ ಘಟಕ, ಸಸಿಹಿತ್ಲು ಯುವಕ ಮಂಡಲ ಮತ್ತಿತರ ಸಂಘ ಸಂಸ್ಥೆಗಳು ಸ್ವಚ್ಚತೆಯಲ್ಲಿ ಪಾಲ್ಗೊಂಡಿತ್ತು.
ಹಳೆಯಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಅಜೀಜ್, ಶರ್ಮಿಳಾ ಕೋಟ್ಯಾನ್, ಅಬ್ದುಲ್ ಖಾದರ್, ಅನಿಲ್‌ಕುಮಾರ್, ಚಂದ್ರಕುಮಾರ್, ಮಾಲತಿ ಕೋಟ್ಯಾನ್, ಗುಣವತಿ, ಪಿಡಿಒ ಅಬೂಬಕ್ಕರ್, ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ, ಯೋಜನಾಧಿಕಾರಿ ಪೈಕ ವೆಂಕಟರಮಣ, ರಾಮಚಂದ್ರ ಶಾಸ್ತ್ರಿ, ಘಟಕದ ವಿದ್ಯಾರ್ಥಿ ಪ್ರಮುಖರಾದ ಅಭಿಷೇಕ್, ಬಿಂದಿಯಾ ಶೆಟ್ಟಿ, ಶೆರ್ಲಿ ಸುವರ್ಣ, ರಾಕೇಶ್ ಹೊಸಬೆಟ್ಟು, ಯುವಕ ಮಂಡಲದ ಪ್ರವೀಣ್, ವಿನೋದ್‌ಕುಮಾರ್, ಜೇಸಿಐ ಸಂಸ್ಥೆಯ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

Haleyangadi-02101704

Comments

comments

Comments are closed.

Read previous post:
Haleyangadi-02101703
ಮನೆ ಮನೆಗೆ ಕಾಂಗ್ರೆಸ್ ಅಭಿಯಾನ

ಪಡುಪಣಂಬೂರು: ಅಶಕ್ತರ ಅಭಿವೃದ್ಧಿಯೇ ಕಾಂಗ್ರೆಸ್ ನ ಮೂಲ ಮಂತ್ರವಾಗಿದೆ. ನುಡಿದಂತೆ ನಡೆದ ಸಿದ್ಧರಾಮಯ್ಯರ ಸರಕಾರ, ಬಜೆಟ್‌ನಲ್ಲಿ 165 ಯೋಜನೆಗಳನ್ನು ಘೋಷಿಸಿದಂತೆ 160 ಭರವಸೆಗಳನ್ನು ಈಡೇರಿಸಿದೆ ಎಂದು ಕೆ.ಪಿ.ಸಿ.ಸಿ...

Close