ದೇವದರ್ಶನ ಪಾತ್ರಿ ಸೇವೆ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಳೆದ 30ವರ್ಷಗಳಿಂದ ಶ್ರೀ ಕಾಲಭೈರವ ದೇವದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ವಸಂತ ನಾಯಕ್ ಫಲಿಮಾರ್ಕರ್ ರವರಿಂದ ಬುಧವಾರ ಶ್ರೀ ಕ್ಷೇತ್ರದಲ್ಲಿ ದೇವಧರ್ಶನ ಸೇವೆ ನಡೆದು ಭಕ್ತವೃಂದಕ್ಕೆ ಅಭಯ ಪ್ರಸಾದ ನೀಡಲಾಯಿತು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಅಪಾರ ಪ್ರಸಿದ್ದಿಯನ್ನು ತಂದಿರುವ ಶ್ರೀ ಕಾಲ ಭೈರವ ದರ್ಶನ ಸೇವೆಗೆ ಮೂರು ಶತಮಾನ ಸಂದಿದ್ದು 1987ರಲ್ಲಿ ಅಂದಿನ ದರ್ಶನ ಪಾತ್ರಿ ಶ್ರೀ ದೇವರಾಯ ನಾಯಕರು ನಿವೃತ್ತರಾದ ಸಂದರ್ಭ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ವಸಂತ ನಾಯಕ್ ಫಲಿಮಾರ್ಕರ್ ರವರು ತಮ್ಮ ನನೆತನದ ಗೌರವ ಹಾಗೂ ಮೂಲ್ಕಿ ಹತ್ತು ಸಮಸ್ತರ ಮನವಿಗೆ ಸ್ಪಂದಿಸಿ ಶ್ರೀ ಕಾಶೀ ಮಠಾದೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದೊಂದಿಗೆ ದರ್ಶನ ಪಾತ್ರಿಯಾಗಿ ಸೇವೆ ಪ್ರಾರಂಭಿಸಿ ಮೂರು ದಶಕದ ಸೇವೆಯಲ್ಲಿ ಶ್ರೀ ಕ್ಷೇತ್ರದ ಭಕ್ತರ ಅಪಾರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.

Haleyangadi-04101704

Comments

comments

Comments are closed.

Read previous post:
Kinnigoli-03101706
ಕೆಮ್ರಾಲ್ : ಎನ್ ಎಸ್ ಎಸ್ ಶಿಬಿರ

ಕಿನ್ನಿಗೋಳಿ: ಯುವಜನತೆ ಕೌಶಲ್ಯವನ್ನು ಅಭಿವೃದ್ದಿ ಪಡಿಸಿ ದೇಶ ಕಟುವ ಕೆಲಸ ಮಾಡಬೇಕು ಎಂದು ತೋಕೂರು ರಾಮಕೃಷ್ಣ ಪೂಂಜ ಕೈಗಾರಿಕಾ ಸಂಸ್ಥೆಯ ಪ್ರಿನ್ಸಿಪಾಲ್ ವೈ ಎನ್ ಸಾಲಿಯಾನ್ ಹೇಳಿದರು ಕೆಮ್ರಾಲ್...

Close