ಕಿನ್ನಿಗೋಳಿ ಅ.18 ಗೂಡುದೀಪ ಸ್ಪರ್ಧೆ

images

ಕಿನ್ನಿಗೋಳಿ: ಕಿನ್ನಿಗೋಳಿಯ ಯುಗಪುರುಷದ ಸಹಕಾರದೊಂದಿಗೆ ಲಯನ್ಸ್ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮೂಲ್ಕಿ, ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು – ಕಿನ್ನಿಗೋಳಿ, ಯಕ್ಷಲಹರಿ (ರಿ.) ಕಿನ್ನಿಗೋಳಿ, ವಿಜಯಾ ಕಲಾವಿದರು ಕಿನ್ನಿಗೋಳಿ ಸಂಸ್ಥೆಗಳ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಇದೇ ಅಕ್ಟೋಬರ್ ತಾ. 18ರಂದು ಸಾಯಂ. ಗಂಟೆ 3ಕ್ಕೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮಧ್ಯಾಹ್ನ ಗಂಟೆ 2ಕ್ಕೆ ಗೂಡುದೀಪ ಪ್ರದರ್ಶಿಸಬೇಕು. ಕೈಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಗೂಡುದೀಪಗಳಿಗೆ ಅವಕಾಶವಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಅಂತೆಯೇ ಭಾಗವಹಿಸುವವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ. ಭಾಗವಹಿಸುವವರು 9901657490, 9481960238, 9611390097, 0824-2295423 ಇವರನ್ನು ಸಂಪರ್ಕಿಸಿ.

Comments

comments

Comments are closed.

Read previous post:
Kinnigoli-071017010
ತೋಕೂರು ಓಂಕಾರೇಶ್ವರೀ ಮಂದಿರದಿಂದ ನೆರವು

ತೋಕೂರು: ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ 10ನೇ ತೋಕೂರಿನ ಶ್ರೀ ಓಂಕಾರೇಶ್ವರೀ ಮಂದಿರದ ಸದಸ್ಯರು ದಸರಾ ಹಬ್ಬದ ಪ್ರಯುಕ್ತ "ಹುಲಿವೇಷ ಕುಣಿತ" ಸೇವೆಯಲ್ಲಿ ಸಂಗ್ರಹಗೊಂಡ ನಿಧಿಯನ್ನು ಸ್ಥಳೀಯ ಆರ್ಥಿಕ...

Close