ಶ್ರೀ ಕಾಲಭೈರವ ಮೂಲಮುದ್ರಾ ಪ್ರದಾನ

ಮೂಲ್ಕಿ: ಶೃದ್ದಾ ಭಕ್ತಿಯಿಂದ ನಡೆಸುವ ಸೇವೆಗೆ ಭಗವಂತ ಒಲಿದು ಹರಸುತ್ತಾರೆ ಎಂಬುವುದಕ್ಕೆ ಮೂಲ್ಕಿ ಕ್ಷೇತ್ರ ಸಾಕ್ಷಿಯಾಗಿದೆ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.
ಮೂಲ್ಕಿಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರದ ನೂತನ ದರ್ಶನ ಪಾತ್ರಿ ಪಿ.ಸತ್ಯನಾರಾಯಣ ನಾಯಕ್‌ರವರಿಗೆ ಶ್ರೀ ಕಾಲಭೈರವ ಮೂಲಮುದ್ರಾ ಪ್ರದಾನ ನೆರವೇರಿಸಿದ ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರದಲ್ಲಿ ಕಳೆದ ಮೂರು ಶತಮಾನಗಳಿಂದ ಒಂದೇ ಕುಟುಂಬದವರು ದರ್ಶನ ಸೇವಾ ಕಾರ್ಯವನ್ನು ಬಹಳ ಶೃದ್ದಾ ಭಕ್ತಿಯಿಂದ ನಡೆಸಿಕೊಂಡು ಬಂದಿರುವ ಕಾರಣ ಕ್ಷೇತ್ರದ ವೈಭವ ಹೆಚ್ಚಲು ಕಾರಣವಾಗಿದೆ ,ಕಾಶೀ ಮಠದ ಹಿರಿಯ ಯತಿ ಪರಂಪರೆಯಂತೆ ನೂತನ ದರ್ಶನ ಪಾತ್ರಿಗೆ ಮೂಲಮುದ್ರಾ ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿದೆ ಎಂದ ಶ್ರೀಗಳು ಶ್ರೀ ದೇವರಲ್ಲಿ ವಿಶ್ವಾಸ ಐಕ್ಯಮತದ ಕಾರ್ಯ ಎಲ್ಲರಿಗೂ ಒಳಿತನ್ನು ನೀಡುತ್ತದೆ ಎಂದರು.
ಇದಕ್ಕೆ ಮುನ್ನ ಶ್ರೀ ಸ್ವಾಮೀಜಿಯವರಿಂದ ಶ್ರೀ ದೇವರಿಗೆ ಷೋಡಶೋಪಚಾರ ಪೂಜೆ,ಮಂಗಳಾರತಿ ಸೇವೆ ನಡೆಯಿತು.ಬಳಿಕ ಶ್ರೀ ಸ್ವಾಮೀಜಿಯವರು ಪಿ.ಸತ್ಯನಾರಾಯಣ ನಾಯಕ್‌ರವರಿಗೆ ಶ್ರೀ ಕಾಲಭೈರವ ಮೂಲಮುದ್ರಾ ಪ್ರದಾನ ಮಾಡಿ ಹರಸಿದರು.
ಸಭಾಕಾರ್ಯಕ್ರಮಕ್ಕೆ ಮುನ್ನ ಶ್ರೀ ಸ್ವಾಮೀಜಿಯವರಿಗೆ ಮೂಲ್ಕಿ ಹತ್ತು ಸಮಸ್ತರಿಂದ ಪಾದಪೂಜೆ ನಡೆಯಿತು.ಬಳಿಕ ಕಳೆದ ೩೦ ವರ್ಷಗಳಿಂದ ಅವಿರತವಾಗಿ ಶ್ರೀ ದೇವಳದಲ್ಲಿ ಶ್ರೀ ಕಾಲಭೈರವ ದರ್ಶನ ಸೇವೆಗೈದ ಪಲಿಮಾರು ವಸಂತ ನಾಯಕ್‌ರವರಿಗೆ ಫಲಮಂತ್ರಾಕ್ಷತೆಯೊಂದಿಗೆ ವಿಶೇಷ ಪ್ರಸಾದ ನೀಡಿ ಗೌರವಿಸಲಾಯಿತು.
ಬಳಿಕ ಶೀ ಸ್ವಾಮೀಜಿಯವರನ್ನು ಕೊಂಚಾಡಿ ಮೊಕ್ಕಾಂಗೆ ವಿದ್ಯುಕ್ತವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭಕ್ಷಥ್ರದ ಪರ್ಯಾಯ ಅರ್ಚಕ ರಮಾನಾಥ ಭಟ್,ಪುರೋಹಿತ ಅರ್ಚಕ ಲಕ್ಷ್ಮೀನಾರಾಯಣ ಭಟ್,ಅನುವಂಶಿಕ ಮೊಕ್ತೇಸರ ಯು.ವೇದವ್ಯಾಸ ಶೆಣೈ,ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ಶೆಣೈ,ಅತುಲ್ ಕುಡ್ವ,ದೇವಣ್ಣ ನಾಯಕ್,ಸತ್ಯೇಂದ್ರ ಶೆಣೈ,ಯು.ಬಾಬ್ರಾಯ ಶೆಣೈ,ಮ್ಯಾನೇಜರ್ ಸುರೇಂದ್ರ ಶೆಣೈ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕ್ಷೇತ್ರದ ವೈದಿಕರಾದ ಪದ್ಮನಾಭ ಭಟ್ ಪ್ರಾರ್ಥಿಸಿ,ನಿರೂಪಿಸಿದರು.

Kinnigoli-07101709

Comments

comments

Comments are closed.

Read previous post:
Kinnigoli-07101708
ಸಸಿಹಿತ್ಲು: ಚೆಕ್ ಹಸ್ತಾಂತರ

ಸಸಿಹಿತ್ಲು:  ಯುವಕ ಮಂಡಲಕ್ಕೆ ಅನುದಾನ ಬಿಡುಗಡೆ ಚೆಕ್ ಹಸ್ತಾಂತರ.

Close