ಪಕ್ಷಿಕೆರೆ ಏಕತೆಗಾಗಿ ಓಟ

ಕಿನ್ನಿಗೋಳಿ: ದೈಹಿಕ ಮಾನಸಿಕ ಸ್ಥೆರ್ಯ ಹಾಗೂ ಆರೋಗ್ಯದ ರಕ್ಷಣೆಗೆ ಕ್ರೀಡೆ ತುಂಬಾ ಸಹಕಾರಿ ಎಂದು ಮುಲ್ಕಿ ಪೊಲೀಸ್ ನೀರಿಕ್ಷಕ ಶಾಂತಪ್ಪ ಹೇಳಿದರು.
ಕಲಾತರಂಗ್ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿ ಜಂಟಿ ಆಶ್ರಯದೊಂದಿಗೆ ಭಟ್ಟಕೋಡಿ ದ್ವಾರದಿಂದ ಪಕ್ಷಿಕೆರೆ ದ್ವಾರದ ತನಕ ಅಯೋಜಿಸಿದ ಮ್ಯಾರಥಾನ್ ಓಟದ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಧನಂಜಯ ಶೆಟ್ಟಿಗಾರ್, ಕೆಮ್ರಾಲ್ ಪಂಚಾಯಿತಿ ಕಾರ್ಯದರ್ಶಿ ಕೇಶವ್ ದೇವಾಡಿಗ, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಗೀತಾ ಆರ್ ಶೆಟ್ಟಿ, ವಿನಾಯಕ ಮಿತ್ರ ಮಂಡಳಿಯ ಉಮೇಶ್ ಹಾಗೂ ಅನೇಕ ಸಂಘ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು. ಕಲಾ ತರಂಗ್‌ನ ಸಂಘಟಕ ನಿತಿನ್ ವಾಸ್ ಸ್ವಾಗತಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ
13ರಿಂದ 16ವರ್ಷದ ವಿಭಾಗ
ಪ್ರಥಮ ಪ್ರಣಾಮ್ ಶೆಟ್ಟಿ , ದ್ವಿತೀಯ -ಹರ್ಷಿತ್
17ರಿಂದ 20ವರ್ಷದ ವಿಭಾಗ
ಪ್ರಥಮ -ನಿಖೇಶ್ ಪೂಜಾರಿ, ದ್ವಿತೀಯ -ಮನೋಹರ್
21 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ವಿಭಾಗ
ಪ್ರಥಮ -ಸಚಿನ್ ಪೂಜಾರಿ, ದ್ವಿತೀಯ ಸುನೀಲ್ ಡಿಸಿಲ್ವ

Kinnigoli-071017013

Comments

comments

Comments are closed.

Read previous post:
Kinnigoli-071017012
ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿಗಾರ್ ಆಯ್ಕೆ

ಕಿನ್ನಿಗೋಳಿ: ಕರ್ನಾಟಕ ಸ್ಟೇಟ್ ಟೈಲರ‍್ಸ್ ಎಸೋಸಿಯೇಶನ್ ಮೂಲ್ಕಿ ಮೂಡಬಿದಿರೆ Pತ್ರದ 2017-18 ಸಾಲಿನ ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಕೇಶವ ಕಾಮತ್, ಕೋಶಾಧಿಕಾರಿ ಜಯ ನಂದಿನಿ ,...

Close