ಕಾರುಗಳ ನಡುವೆ ಅಪಘಾತ ಮಹಿಳೆ ಗಂಭೀರ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಸುರತ್ಕಲ್ ಸೂರಜ್ ಹೋಟೇಲ್ ಮುಂಬಾಗದಲ್ಲಿ ಕಾರುಗಳ ನಡುವೆ ಅಪಘಾತ ನಡೆದು ಮಹಿಳೆಯೊಬ್ಬರು ಗಂಬೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ವಾಮಂಜೂರು ಕಡೆಯಿಂದ ಸುರತ್ಕಲ್ ಬಂಟರ ಭವನದಲ್ಲಿ ಮದುವೆಗೆಂದು ಹೋಗುತ್ತಿದ್ದ ಕಾರು ಸೂರಜ್ ಹೋಟೇಲು ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮದುವೆ ದಿಬ್ಬಣದ ಕಾರು ಒಂದು ಸುತ್ತು ತಿರುಗಿದ್ದು ಕಾರಿನಲ್ಲಿದ್ದ ಮಹಿಳೆಯರಲ್ಲಿ ಕವಿತಾ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಅಪಘಾತದ ಸಂದರ್ಭ ಕಾರಿನಲ್ಲಿದ್ದ ಮದುಮಗಳು ಸಹಿತ ಎಲ್ಲರು ಗಾಬರಿಯಿಂದ ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಸುರತ್ಕಲ್ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kinnigoli-07101706 Kinnigoli-07101707

Comments

comments

Comments are closed.

Read previous post:
Kinnigoli-07101705
ಪಕ್ಷಿಕೆರೆ: ರಜತೋತ್ಸವ ಸಂಭ್ರಮ

ಕಿನ್ನಿಗೋಳಿ: ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಜತೋತ್ಸವ ಸಂಭ್ರಮ - 2018 ಉದ್ಘಾಟನಾ ಸಮಾರಂಭದಲ್ಲಿ ಭಾರತ ಪರಿಕ್ರಮಿಗಳಾದ ರವೀಂದ್ರನಾಥ ರೈ ಅತ್ತೂರು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮುಲ್ಕಿ...

Close