ತೋಕೂರು ಓಂಕಾರೇಶ್ವರೀ ಮಂದಿರದಿಂದ ನೆರವು

ತೋಕೂರು: ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ 10ನೇ ತೋಕೂರಿನ ಶ್ರೀ ಓಂಕಾರೇಶ್ವರೀ ಮಂದಿರದ ಸದಸ್ಯರು ದಸರಾ ಹಬ್ಬದ ಪ್ರಯುಕ್ತ “ಹುಲಿವೇಷ ಕುಣಿತ” ಸೇವೆಯಲ್ಲಿ ಸಂಗ್ರಹಗೊಂಡ ನಿಧಿಯನ್ನು ಸ್ಥಳೀಯ ಆರ್ಥಿಕ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಹಸ್ತಾಂತರಿಸಿದರು.
ತೋಕೂರಿನ ವೃದ್ಧ ದಂಪತಿಗಳಾದ ನಾಗರಾಜ ಭಟ್ ಮತ್ತು ಶಕುಂತಲಾ ಭಟ್ ದಂಪತಿಗಳಿಗೆ, ಅಪಘಾತದಿಂದ ದುಡಿಯಲು ಅಶಕ್ತರಾಗಿರುವ ಇಂದಿರಾ ನಗರ ನಿವಾಸಿ ಶಶಿಧರ್ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಪಡುಪಣಂಬೂರು ಪಡುತೋಟದ ಮಲ್ಲಿಕಾ ಇವರುಗಳಿಗೆ ಮಂದಿರದ ಸದಸ್ಯರು ಅವರುಗಳ ಮನೆಗೆ ತೆರಳಿ ನಿಧಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಅನಿಲ್ ಅಮೀನ್, ಕಾರ್ಯದರ್ಶಿ ಪದ್ಮರಾಜ್ ಕರ್ಕೇರ, ಸಲಹೆಗಾರ ವೀರಪ್ಪ ಮೇಸ್ತ್ರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Kinnigoli-071017010

Comments

comments

Comments are closed.

Read previous post:
Kinnigoli-07101709
ಶ್ರೀ ಕಾಲಭೈರವ ಮೂಲಮುದ್ರಾ ಪ್ರದಾನ

ಮೂಲ್ಕಿ: ಶೃದ್ದಾ ಭಕ್ತಿಯಿಂದ ನಡೆಸುವ ಸೇವೆಗೆ ಭಗವಂತ ಒಲಿದು ಹರಸುತ್ತಾರೆ ಎಂಬುವುದಕ್ಕೆ ಮೂಲ್ಕಿ ಕ್ಷೇತ್ರ ಸಾಕ್ಷಿಯಾಗಿದೆ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು....

Close