ಬಯಲಾಟ ಸಮಿತಿಯ ಪೂರ್ವಭಾವಿ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಹತ್ತು ಸಮಾನಸ್ತಕರ ಶ್ರೀ ಧರ್ಮಸ್ಥಳ ಮೇಳದ ಬಯಲಾಟ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುವ ಬಯಲಾಟವು ಈ ಬಾರಿ ರಜತ ವರ್ಷ ಆಚರಣೆ ಮಾಡುವ ನಿಟ್ಟಿನಲ್ಲಿ ಸಮಿತಿಯ ಪೂರ್ವಭಾವಿ ಸಭೆಯು ಭಾನುವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಡಿಸೆಂಬರ್ 29 ರಂದು ಬಸ್ ನಿಲ್ದಾಣದ ಬಳಿ ಬಯಲಾಟ ನಡೆಯಲಿದ್ದು ಮೇಳದ ಹಿರಿಯ ಕಲಾವಿದರನ್ನು ಗೌರವಿಸುವ ಹಾಗೂ ಮೇಳದ ದೇವರನ್ನು ಯುಗಪುರುಷದಿಂದ ಬಸ್ ನಿಲ್ದಾಣದ ತನಕ ಮೆರವಣಿಗೆಯ ತರಲಾಗುವುದು ಎಂದು ಸಮಿತಿಯಲ್ಲಿ ನಿರ್ಣಯಿಸಲಾಯಿತು.
ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪುರುಷೋತ್ತಮ ಶೆಟ್ಟಿ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಐಕಳ ಮಹಾಬಲ ಶೆಟ್ಟಿ, ಸುರೇಶ್ ಶೆಟ್ಟಿ ಕೊಡೆತ್ತೂರು ದೇವಸ್ಯ, ಪುರಂದರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ದಿವಾಕರ ಶೆಟ್ಟಿ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-09101702
ಕಿನ್ನಿಗೋಳಿ ಹಿರಿಯ ನಾಗರಿಕ ಗುರುತು ಚೀಟಿ

ಕಿನ್ನಿಗೋಳಿ: ಸರಕಾರದ ಸವಲತ್ತುಗಳನ್ನು ಗ್ರಾಮೀಣ ಭಾಗದ ಜನಸಾಮಾನ್ಯರು ಸಉಪಯೋಗಪಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ವೈದ್ಯಾಧಿಕಾರಿ ಭಗಿನಿ ಡಾ. ಜೀವಿತಾ ಹೇಳಿದರು. ಮಂಗಳೂರು ಹಿರಿಯ ನಾಗರಿಕರ ಸಂಘ, ಲಯನ್ಸ್...

Close