ಕೆಂಚನಕೆರೆ – ಪರಿಸರ ಜಾಗೃತಿ ಜಾಥಾ

ಕಿನ್ನಿಗೋಳಿ: ಪರಿಸರ ಜಾಗೃತಿ ಹಾಗೂ ಪರಿಸರದ ಕಾಳಜಿಯ ಬಗ್ಗೆ ಶಾಲಾ ದಿನಗಳಿಂದಲೇ ರೂಡಿಸಿಕೊಂಡಾಗ ಭವಿಷ್ಯದಲ್ಲಿ ಸ್ವಚ್ಚ ಪರಿಸರ ಪರಿಸರ ಕಂಡುಕೊಳ್ಳಬಹುದು. ಎಂದು ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ರಾವ್ ಹೇಳಿದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಎಂ. ಸಿ. ಟಿ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಮಿಷನ್ ಅಂತ್ಯೋದಯ ಹಾಗೂ ಗ್ರಾಮ ಸಮೃದ್ಧಿ ಸ್ವಚ್ಛಾತಾ ಪಾಕ್ಷಿಕ ಆಚರಣೆಯ ಪ್ರಯುಕ್ತ ಶನಿವಾರ ನಡೆದ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಪಿಡಿಒ ಹರಿಶ್ಚಂದ್ರ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯ ದೊಡ್ಡ ಸಮಸ್ಯೆಯಾಗಿದ್ದು ಪರಿಸರಕ್ಕೆ ಮಾರಕವಾಗಿದೆ. ಪರಿಸರ ಜಾಗೃತಿಯೊಂದಿಗೆ ಸ್ವಚ್ಚ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಅದಕ್ಕೆ ಎಲ್ಲರೂ ಕೈಜೋಡಿಸಿ ಸಹಕಾರ ನೀಡಬೇಕು ಎಂದು ಹೇಳಿದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್, ಅಬ್ದುಲ್ ಶರೀಫ್, ಸುನೀತಾ ಪಿ. ಆಚಾರ್ಯ, ಶಾಲಾ ಮುಖ್ಯ ಶಿಕ್ಷಕ ಹರೀಶ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಇಬ್ರಾಹಿಂ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಸರಿತಾ, ಶಾಲಾ ಆಡಳಿತ ಮಂಡಳಿಯ ಸದಸ್ಯ ಮೊಯ್ದಿನ್ ಮೂಲ್ಕಿ ಉಪಸ್ಥಿತರಿದ್ದರು.
ಎಂಸಿಟಿ ಶಾಲೆಯಿಂದ ಕೆಂಚನಕೆರೆ ಶಾಲೆ , ಅಂಗರಗುಡ್ಡೆ ತನಕ ಶಾಲಾ ಮಕ್ಕಳ ಜಾಥಾ ನಡೆಯಿತು.

Kinnigoli-09101703

Comments

comments

Comments are closed.

Read previous post:
ಬಯಲಾಟ ಸಮಿತಿಯ ಪೂರ್ವಭಾವಿ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಹತ್ತು ಸಮಾನಸ್ತಕರ ಶ್ರೀ ಧರ್ಮಸ್ಥಳ ಮೇಳದ ಬಯಲಾಟ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುವ ಬಯಲಾಟವು ಈ ಬಾರಿ ರಜತ ವರ್ಷ ಆಚರಣೆ ಮಾಡುವ ನಿಟ್ಟಿನಲ್ಲಿ ಸಮಿತಿಯ...

Close