ಉಲ್ಲಂಜೆ ಕೊರಗಜ್ಜ ಸ್ವರ್ಣ ಕವಚ ಸಮರ್ಪಣೆ

ಕಿನ್ನಿಗೋಳಿ: ಉಲ್ಲಂಜೆ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಚಾಮುಂಡೇಶ್ವರಿ ಗುಳಿಗ ಸನ್ನಿಧಿಯಲ್ಲಿ ಕ್ಷೇತ್ರದ ಆರಾಧ್ಯ ದ್ಯೆವ ಮಂತ್ರ ದೇವತೆಗೆ ಭಕ್ತಾಧಿಗಳಿಂದ ಸಮರ್ಪಿಸಲ್ಪಡುವ ಸ್ವರ್ಣ ಕವಚ ಸಮರ್ಪಣಾ ಕಾರ್ಯಕ್ರಮ ಹಾಗೂ ನೇಮೋತ್ಸವವು ಅಕ್ಟೋಬರ್ 11ರ ಬುಧವಾರ ಬೆಳಿಗ್ಗೆ ನಡೆಯಲಿದೆ.
ಬೆಳಿಗ್ಗೆ 8.30ಕ್ಕೆ ಗಣ ಹೋಮ,ಕಲಶಾಭಿಷೇಕ,ಪುನರ್ ಪ್ರತಿಷ್ಠೆ ನಡೆಯಲಿದ್ದು ರಾತ್ರಿ ಜರಗಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ ಅಭಯಚಂದ್ರ ಜ್ಯೆನ್ ವಹಿಸಲಿದ್ದಾರೆ. ಕಟೀಲು ದೇವಳ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪರು ಶುಭಾಶಂಸನೆಗ್ಯೆಯಲಿದ್ದು ಕೊಡೆತ್ತೂರು ಭಂಡಾರ ಮನೆ ಜಯರಾಮ ಮುಕ್ಕಾಲ್ದಿ, ದ.ಕ.ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರ‍್ಯೆ, ಕೊಡೆತ್ತೂರು ಅರಸು ಕುಂಜಿರಾಯ ದ್ಯೆವಸ್ಥಾನ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು ರಾತ್ರಿ ಮಂತ್ರ ದೇವತೆ ಮತ್ತು ಕೊರಗಜ್ಜ ದ್ಯೆವದ ನೇಮೋತ್ಸವವು ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-09101704
ಕೆರೆಕಾಡು ಗೂಡು ದೀಪ ರಚನೆ ಪ್ರಾತ್ಯಕ್ಷತೆ

ಕಿನ್ನಿಗೋಳಿ: ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ಸೌತ್ ಕೆನರಾ ಫೋಟೋಗ್ರಾಫರರ್ಸ್ಸ್ ಅಸೋಸಿಯೇಶನ್ ನ ದ.ಕ. ಮತ್ತು ಉಡುಪಿ ಜಿಲ್ಲೆಯ ಸುರತ್ಕಲ್ ವಲಯದ ಸಂಯುಕ್ತ ಆಶ್ರಯದಲ್ಲಿ ಕೆರೆಕಾಡು...

Close