ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ

ಕಿನ್ನಿಗೋಳಿ: ಹಳೆಯಂಗಡಿ ಬಳಿಯ ಲೈಟ್‌ಹೌಸ್‌ನ 10ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ ಕಾರ್ಯದರ್ಶಿ ಕೆ.ಪಿ.ಜೋಸೆಫ್ ಅವರು ಇತ್ತೀಚೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಒಂದು ಕಾಲನ್ನು ಕಳೆದುಕೊಂಡಿರುವುದರಿಂದ ಅವರ ಮನೆಗೆ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಸೋಮವಾರ ಭೇಟಿ ನೀಡಿದರು ಝೋಸೆಫರ ಮನವಿ ಸ್ವೀಕರಿಸಿ ತನ್ನ ಶಾಸಕರ ನಿಧಿಯಿಂದ 1.60 ಲಕ್ಷ ರೂ. ವೆಚ್ಚದ ವಿಕಲಚೇತನರು ಚಲಾಯಿಸುವ ವಿಶೇಷ ಮೊಟರ್‌ಬೈಕ್ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸಾಹುಲ್ ಹಮೀದ್ ಕದಿಕೆ, ಸಾಮಾಜಿಕ ಕಾರ್ಯಕರ್ತ ನಿರಂಜನ್ ಎಸ್. ಬಂಗೇರ ಹರಿಪಾದೆ, ಪಡುಪಣಂಬೂರು ಪಂಚಾಯಿತಿ ಸದಸ್ಯ ದಿನೇಶ್ ಕುಲಾಲ್, 10ನೇ ತೋಕೂರು ಯೂತ್ ಕ್ಲಬ್‌ನ ಗೌರವಾಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಅಧ್ಯಕ್ಷ ಸುಧೀರ್ ಭಂಡಾರಿ, ಸಲಹೆಗಾರರಾದ ನವೀನ್ ಚಂದ್ರ ಸುವರ್ಣ ಉಪಸ್ಥಿತರಿದ್ದರು.

Kinnigoli-12101703

Comments

comments

Comments are closed.

Read previous post:
Kinnigoli-12101702
ಅಧ್ಯಕ್ಷರಾಗಿ ಯಾದವ ಕೋಟ್ಯಾನ್ ಆಯ್ಕೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಪೆರ್ಮುದೆ ಗುತ್ತಿಗೆದಾರ ಯಾದವ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಧಾ ಎಸ್.,...

Close