ಕಟೀಲು ಶಿಕ್ಷಕ ರಕ್ಷಕ ಸಂಘದ ಸಭೆ

ಕಿನ್ನಿಗೋಳಿ: ಶಾಲೆ ಕಾಲೇಜಿಗೆ ಕಳುಹಿಸುವ ಮಕ್ಕಳ ಬಗ್ಗೆ ಹೆತ್ತವರು ಓದಿನ ಬಗ್ಗೆ ಗಮನ ಹರಿಸುವಂತೆ ನೋಡಿಕೊಳ್ಳಬೇಕು ಎಂದು ಕಟೀಲು ದೇವಳದ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಸಂಘದ ಕೋಶಾಧಿಕಾರಿ ವನಿತಾ ಲೆಕ್ಕಪತ್ರ ಮಂಡಿಸಿದರು. ಸಂಘದ ಅಧ್ಯಕ್ಷ ಯಾದವ ಕೋಟ್ಯಾನ್, ದೇವಳದ ಕಾನೂನು ಸಲಹೆಗಾರರಾದ ಕೆ.ಎಸ್.ಶೆಟ್ಟಿಗಾರ್, ಕೊಡೆತ್ತೂರುಗುತ್ತು ಸುಧೀರ್ ಶೆಟ್ಟಿ, ಪ್ರಾಂಶುಪಾಲರಾದ ಎಂ. ಬಾಲಕೃಷ್ಣ ಶೆಟ್ಟಿ, ಸಂಘದ ಕಾರ್ಯದರ್ಶಿಜಗದೀಶ್ಚಂದ್ರ ಕೆ.ಕೆ. ಹಾಗೂ ಉಪಾಧ್ಯಕ್ಷೆ ರಾಧಾ. ಎಸ್ ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಸುರೇಶ್ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಪೂಜಾ ವಂದಿಸಿದರು. ಆಶಿಕಾ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಸಂತೋಷ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.

Kinnigoli-12101701

Comments

comments

Comments are closed.

Read previous post:
ಉಲ್ಲಂಜೆ ಕೊರಗಜ್ಜ ಸ್ವರ್ಣ ಕವಚ ಸಮರ್ಪಣೆ

ಕಿನ್ನಿಗೋಳಿ: ಉಲ್ಲಂಜೆ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಚಾಮುಂಡೇಶ್ವರಿ ಗುಳಿಗ ಸನ್ನಿಧಿಯಲ್ಲಿ ಕ್ಷೇತ್ರದ ಆರಾಧ್ಯ ದ್ಯೆವ ಮಂತ್ರ ದೇವತೆಗೆ ಭಕ್ತಾಧಿಗಳಿಂದ ಸಮರ್ಪಿಸಲ್ಪಡುವ ಸ್ವರ್ಣ ಕವಚ ಸಮರ್ಪಣಾ ಕಾರ್ಯಕ್ರಮ...

Close