ಅ.15 : ಕಿನ್ನಿಗೋಳಿ ನವೀಕೃತ ಚರ್ಚ್ ಉದ್ಘಾಟನೆ

ಕಿನ್ನಿಗೋಳಿ: ಸುಮಾರು 200 ವರ್ಷಗಳಿಗೂ ಹೆಚ್ಚಿನ ಚರಿತ್ರೆ ಇರುವ 17 ವಾಳೆ(ವಾಡು)ಗಳನ್ನು ಹೊಂದಿರುವ ಪ್ರಸ್ತುತ 650 ಕುಟುಂಬಗಳನ್ನು ಹೊಂದಿರುವ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ದೇವಾಲಯವು ಸುಮಾರು 1.5 ಕೋಟಿರೂ ವೆಚ್ಚದಲ್ಲಿ ನವೀಕರಣಗೊಂಡು ಅ.15ರಂದು ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮ ಪ್ರಾಂಥ್ಯದ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ರವರಿಂದ ಲೋಕಾರ್ಪಣೆ ಗೊಳ್ಳಲಿದೆ ಎಂದು ಕಿನ್ನಿಗೋಳಿ ಕೊಸೆಸಾವ್ ಅಮ್ಮ ನವರ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ಫಾ.ವಿನ್ಸೆಂಟ್ ಮೊಂತೇರೊ ಹೇಳಿದರು.
ಚರ್ಚ್ ಮಿನಿ ಹಾಲ್ ನಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರ್ನಾಟಕ ಸರಕಾರದ ರೂ 50ಲಕ್ಷ ಅನುದಾನ ಮತ್ತು ಊರ ಪರವೂರ ಭಕ್ತಭಿಮಾನಿಗಳಿಂದ ಸುಸಜ್ಜಿತ ಚರ್ಚ್ ನಿರ್ಮಿಸಲಾಗಿದೆ. ದೇವಾಲಯದ ಮೇಲ್ಚಾವಣಿ, ನವೀಕೃತ ಬಲಿಪೀಠ, ಸುಂದರ ಗೋಪುರ ಸಹಿತ ಒಳಾಂಗಣದಲ್ಲಿ ಸಾಗವಾನಿ ಮರದ ಹೊದಿಕೆ ಹಾಗೂ ಬಲಿ ಪೀಠದಲ್ಲಿ ವಿಶೇಷ ವಿದ್ಯುತ್ ದೀಪ ವ್ಯವಸ್ಥೆ, ಪ್ರಾರ್ಥನೆಗಾಗಿ ಪುಸ್ತಕದ ಬದಲು ಡಿಜಿಟಲ್ ಪರದೆ ಹಾಗೂ ವಿಶೇಷ ಕೆತ್ತನೆಗಳಿಂದ ಕೂಡಿದ ಹೆಬ್ಬಾಗಿಲನ್ನು ನಿರ್ಮಿಸಲಾಗಿದೆ.
ಅ. 15 ಬೆಳಿಗ್ಗೆ 8ಗಂಟೆಗೆ ಚರ್ಚು ಲೋಕಾರ್ಪಣೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ವಂದನೀಯ ಬಿಷಪರ ಘನ ಉಪಸ್ಥಿತಿಯಲ್ಲಿ ಪ್ರಾರಂಭಗೊಳ್ಳಲಿದ್ದು 10ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಹೆನ್ರಿ ಡಿಸೋಜಾ, ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಮಂಗಳೂರು ಶಾಸಕ ಜೆ.ಆರ್ ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾ , ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ಭಾಗವಹಿಸಲಿದ್ದಾರೆ.
ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರುಗಳಾದ ಫಾ.ಜೋರ್ಜ್ ಕ್ರಾಸ್ತಾ, ಫಾ.ಅಶೋಕ್ ರಾಯನ್ ಕ್ರಾಸ್ತಾ, ಫಾ ಸುನಿಲ್ ಪಿಂಟೋ, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಸದಸ್ಯರಾದ ಜೋನ್ಸನ್ ಡಿಸೋಜಾ, ವಿಲಿಯಂ ಡಿಸೋಜಾ, ಡೋಲ್ಫಿ ಸಂತುಮಾಯೋರ್ ಉಪಸ್ಥಿತರಿದ್ದರು.

Kinnigoli-12101704 Kinnigoli-12101705 Kinnigoli-12101706

Comments

comments

Comments are closed.

Read previous post:
Kinnigoli-12101703
ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ

ಕಿನ್ನಿಗೋಳಿ: ಹಳೆಯಂಗಡಿ ಬಳಿಯ ಲೈಟ್‌ಹೌಸ್‌ನ 10ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ ಕಾರ್ಯದರ್ಶಿ ಕೆ.ಪಿ.ಜೋಸೆಫ್ ಅವರು ಇತ್ತೀಚೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಒಂದು ಕಾಲನ್ನು ಕಳೆದುಕೊಂಡಿರುವುದರಿಂದ ಅವರ...

Close