ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು

ಕಿನ್ನಿಗೋಳಿ: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಸಂಘ ಸಂಸ್ಥೆಗಳು ಸೂಕ್ತ ಮಾರ್ಗದರ್ಶನ ಪ್ರೋತ್ಸಾಹ ನೀಡಿ ಸಮಾಜ ಮುಖಿ ಚಿಂತನೆಯ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹಳೆಯಂಗಡಿ ಮಹಿಳಾ ಮಂಡಳಿಯ ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ರಾಮಚಂದ್ರ ಹೇಳಿದರು.
ಹಳೆಯಂಗಡಿಯ ಯುವತಿ ಮತ್ತು ಮಹಿಳಾ ಮಂಡಳಿಯ ಸಭಾಂಗಣದಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಳಿಯ ನೂತನ ಅಧ್ಯಕ್ಷೆ ಸುಜಾತ ವಾಸುದೇವ ಅವರಿಗೆ ಜ್ಯೋತಿ ಅವರು ಅಧಿಕಾರವನ್ನು ಹಸ್ತಾಂತರಿಸಿದರು.
ರೇಷ್ಮಾ ಅಶ್ರಫ್, ಹಿತಾಕ್ಷಿ, ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.
ನೂತನ ಉಪಾಧ್ಯಕ್ಷೆ ಸುಲೋಚನಾ ಮಹಾಬಲ, ಪ್ರಧಾನ ಕಾರ್ಯದರ್ಶಿ ರಾಜೇಶ್ವರೀ ರಾಮನಗರ, ಸಹ ಕಾರ್ಯದರ್ಶಿ ಸಾಜಿದಾ, ಕೋಶಾಧಿಕಾರಿ ಪ್ರೇಮಲತಾ ಯೋಗೀಶ್, ಸಾಂಸ್ಕೃತಿಕ ಕಾರ್ಯದರ್ಶಿ ನಿರ್ಮಾಲಾ, ಕ್ರೀಡಾ ಕಾರ್ಯದರ್ಶಿ ಸಾವಿತ್ರಿ ಗೋಪಾಲ್ ಹಾಗೂ ಯುವತಿ ಮಂಡಲದ ಅಧ್ಯಕ್ಷೆಯಾಗಿ ದಿವ್ಯಾಶ್ರಿ ಕೋಟ್ಯಾನ್, ಉಪಾಧ್ಯಕ್ಷೆ ರಶ್ಮಿತಾ, ಕಾರ್ಯದರ್ಶಿ ಹೇಮಾವತಿ, ಸಹ ಕಾರ್ಯದರ್ಶಿ ಶೈಲಜಾ, ಕೋಶಾಧಿಕಾರಿಯಾಗಿ ಜಯಶ್ರೀ ಆಯ್ಕೆಯಾದರು.
ಜ್ಯೋತಿ ಸ್ವಾಗತಿಸಿದರು, ಸುಜಾತಾ ವಂದಿಸಿದರು.

Kinnigoli-14101701

Comments

comments

Comments are closed.

Read previous post:
Kinnigolichurch1
Renovated Kinnigoli Church

Close