ಕಿನ್ನಿಗೋಳಿ : ಆಯುರ್ವೇದ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ಆಯುರ್ವೇದ ಪದ್ಧತಿ ಖುಷಿ ಮುನಿಗಳ ಕಾಲದಿಂದಲೂ ಬೆಳದು ಬಂದಿದ್ದು ಈಗ ವಿಶ್ವದೆಲ್ಲೆಡೆ ವೈಜ್ಞಾನಿಕವಾಗಿ ಅಡ್ಡ ಪರಿಣಾಮವಲ್ಲದ ಉತ್ತಮ ಚಿಕಿತ್ಸಾ ಪದ್ದತಿ ಎಂದು ಶ್ರುತ ಪಟ್ಟಿದೆ ಎಂದು ಮೂಡಬಿದಿರೆ ಆಳ್ವಾಸ್ ಆಯುರ್ವೇದ ಕಾಲೇಜು ಪ್ರಿನ್ಸಿಪಾಲ್ ಡಾ. ವಿನಯಚಂದ್ರ ಶೆಟ್ಟಿ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಹಾಗೂ ಆಳ್ವಾಸ್ ಆಯುರ್ವೇದ ಚಿಕಿತ್ಸಾ ಘಟಕದ ಆಶ್ರಯದಲ್ಲಿ ಶನಿವಾರ ನಡೆದ ಆಯುರ್ವೇದ ಚಿಕಿತ್ಸಾ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ ಶಿಬಿರ ಉದ್ಘಾಟಿಸಿ ಮಾತನಾಡಿ ನಮ್ಮ ಉದಾಸೀನ ಹಾಗೂ ಆಸಡ್ಡೆಯಿಂದ ಕೆಲವು ರೋಗಗಳು ಬರುತ್ತಿದೆ. ಅಲೋಪಥಿಯಿಂದ ಆಗದ ರೋಗಗಳ ಚಿಕಿತ್ಸೆಗೆ ಆಯುರ್ವೇದದಿಂದ ಶಾಶ್ವತವಾಗಿ ದೂರ ಮಾಡಬಹುದು ಎಂದು ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಡಾ. ರತೀಶ್ ಉಡುಪ, ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ , ಆಳ್ವಾಸ್ ಸಂಸ್ಥೆಯ ಭಾಸ್ಕರ್ ಉಪಸ್ಥಿತರಿದ್ದರು.
ಆಳ್ವಾಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಸುನಿಲ್ ಸ್ವಾಗತಿಸಿದರು. ಕಾವ್ಯ ವಂದಿಸಿದರು. ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-15101703

Comments

comments

Comments are closed.

Read previous post:
Kinnigoli-15101701
ಆಹಾರ ಪೋಲು ಮಾಡದೆ ಹಸಿದವನ ಹೊಟ್ಟೆ ತಣಿಸಿರಿ

ಕಿನ್ನಿಗೋಳಿ : ಆಹಾರವನ್ನು ಪೋಲು ಮಾಡದೆ ಹಸಿದವನ ಹೊಟ್ಟೆಯನ್ನು ತಣಿಸಲು ಪ್ರಯತ್ನಿಸುವುದು ಸಹ ಸಮಾಜ ಸೇವೆಯ ಒಂದು ಗುಣ. ಇದರಿಂದ ಸಮಾಜಕ್ಕೊಂದು ಸಂದೇಶ ಸಿಗುತ್ತದೆ ಎಂದು ಕಸಾಪದ ಮಾಜಿ...

Close