ದೇವರ ಪವಿತ್ರ ತಾಣ ದೇವಾಲಯ

ಕಿನ್ನಿಗೋಳಿ : ದೇವರು ನೆಲೆಸಿರುವ ದೇವಾಲಯಗಳು ದೇವರು ಮತ್ತು ಮನುಷ್ಯರ ನಡುವೆ ನಿಕಟ ಸಂಬಂಧ, ಸಂಪರ್ಕ ಕಲ್ಪಿಸುವ ಪವಿತ್ರ ತಾಣ. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಬೆರೆಯುವ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಎಲ್ಲರೂ ಶ್ರಮಿಸಬೇಕು. ಧರ್ಮಗಳ ಮುಖಾಂತರ ಸಮಾಜಕ್ಕೆ ಒಳಿತಾಗುವ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು.
ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ನವೀಕೃತ ದೇವಾಲಯದ ಉದ್ಘಾಟನೆ, ಆಶೀರ್ವಚನ ನೀಡಿ ಮಾತನಾಡಿದರು.
ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಹೆನ್ರಿ ಡಿಸೋಜಾ ಮಾತನಾಡಿ ಭಕ್ತಿ ಶ್ರದ್ಧೆಯ ನಿಷ್ಕಲ್ಮಶ ಜೀವನಕ್ಕೆ ಭಗವಂತನ ಸಹಕಾರವಿದೆ. ನಿದ್ದೆಗೆಡಿಸುವ ಸಮಾಜಮುಖಿ ಚಿಂತನೆಯ ಉತ್ತಮ ಕನಸು ಕಂಡು ಅದು ನನಸಾಗಬೇಕು. ಎಂದು ಹೇಳಿದರು.
ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಚರ್ಚಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ವಿನ್ಸೆಂಟ್ ಮೊಂತೇರೊ, ಸಹಾಯಕ ಧರ್ಮಗುರುಗಳಾದ ಫಾ. ಅಶೋಕ್ ರಾಯನ್ ಕ್ರಾಸ್ತ, ಫಾ. ಜಾರ್ಜ್ ಕ್ರಾಸ್ತ, ಫಾ. ಸುನಿಲ್ ಪ್ರವೀಣ್ ಪಿಂಟೊ, ಅವರನ್ನು ಸನ್ಮಾನಿಸಲಾಯಿತು. ಚರ್ಚ್ ನವೀಕರಣದಲ್ಲಿ ಧನ ಸಹಾಯ ನೀಡಿದ ಧಾನಿಗಳನ್ನು, ಗುತ್ತಿಗೆದಾರರನ್ನು ಗೌರವಿಸಲಾಯಿತು.
ಕರ್ನಾಟಕ ಸರಕಾರ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಮೇರಿವೆಲ್ ಕಾನ್ವೆಂಟ್ ಸುಪೀರಿಯರ್ ಸಿ. ಜೋತ್ಸ್ನಾ, ಕಿನ್ನಿಗೋಳಿ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ವಿನ್ಸೆಂಟ್ ಮಥಾಯಸ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ರೆ. ಫಾ. ವಿನ್ಸೆಂಟ್ ಮೊಂತೇರೊ ಸ್ವಾಗತಿಸಿ ಪ್ರಸಾವನೆಗೈದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ ವಂದಿಸಿದರು. ಅನಿತಾ ಡಿಸೋಜ ಹಾಗೂ ವಿಲಿಯಂ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
Kinnigoli-15101724 Kinnigoli-15101725 Kinnigoli-15101726 Kinnigoli-15101727 Kinnigoli-15101728 Kinnigoli-15101729

Comments

comments

Comments are closed.

Read previous post:
Kinnigoli-15101713
ಕಿನ್ನಿಗೋಳಿ ಕೊಸೆಸಾಂವ್ ಅಮ್ಮ ನವೀಕೃತ ದೇವಾಲಯ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ನವೀಕೃತ ದೇವಾಲಯದ ಉದ್ಘಾಟನೆಯನ್ನು ಭಾನುವಾರ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ನೆರವೇರಿಸಿದರು. ಈ ಸಂದರ್ಭ...

Close