ಆಹಾರ ಪೋಲು ಮಾಡದೆ ಹಸಿದವನ ಹೊಟ್ಟೆ ತಣಿಸಿರಿ

ಕಿನ್ನಿಗೋಳಿ : ಆಹಾರವನ್ನು ಪೋಲು ಮಾಡದೆ ಹಸಿದವನ ಹೊಟ್ಟೆಯನ್ನು ತಣಿಸಲು ಪ್ರಯತ್ನಿಸುವುದು ಸಹ ಸಮಾಜ ಸೇವೆಯ ಒಂದು ಗುಣ. ಇದರಿಂದ ಸಮಾಜಕ್ಕೊಂದು ಸಂದೇಶ ಸಿಗುತ್ತದೆ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಮೂಲ್ಕಿಯ ಜನ ವಿಕಾಸ ಸಮಿತಿಯ ಸಹಯೋಗದೊಂದಿಗೆ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ತೋಕೂರು ಶ್ರೀ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಆಹಾರದ ಅಪವ್ಯಯವನ್ನು ತಡೆಗಟ್ಟುವ ಉದ್ದೇಶದ ಆಹಾರ ಜಾಗೃತಿ ಅಭಿಯಾನ-೨೦೧೭ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮಕ್ಕಳ ಮೂಲಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಪುನರೂರು ಪ್ರತಿಷ್ಠಾನದ ಯೋಜನೆ ಮತ್ತು ಯೋಚನೆ ಉತ್ತಮ ಕಾರ್ಯಕ್ರಮವಾಗಿದೆ ಎಂದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿ, ಪ್ರಸ್ತಾವನೆಗೈದು, ಆಹಾರದ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ಮೂಲ್ಕಿ ಹೋಬಳಿಯ ೯೦ ಶಾಲಾ ಕಾಲೇಜುಗಳಿಗೆ, ಹೋಟೇಲ್, ಕಲ್ಯಾಣ ಮಂಟಪ ಹಾಗೂ ಸಭಾ ಭವನಗಳ ಸಹಿತ ಸುಮಾರು ೨೧೦ ಕಡೆಗಳಿಗೆ ತೆರಳಿ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಘೋಷ ವಾಕ್ಯದ ವಿವಿಧ ಫಲಕಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಮುಂದಿನ ಮೂರು ದಿನಗಳ ಕಾಲ ನಡೆಸಲಿದ್ದೇವೆ ಎಂದರು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ.ಉಷಾರಾಣಿ, ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಶಾಂಭವಿ ಶೆಟ್ಟಿ ನಿಡ್ಡೋಡಿ, ಲಯನೆಸ್ ಕ್ಲಬ್ ಅಧ್ಯಕ್ಷೆ ಸ್ಮಿತಾ ಎಂ. ಡಿಸೋಜಾ, ಶಾಲಾ ಮುಖ್ಯ ಶಿಕ್ಷಕಿ ಗೌರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಯೋಗೀಶ್, ಸಹಾಯಕಿ ವಿಶಾಂತಿ, ಉದ್ಯಮಿ ನಿಡ್ಡೋಡಿ ಸಚಿನ್ ಶೆಟ್ಟಿ, ಗ್ರಾಮ ಕರಣಿಕ ಮೋಹನ್, ಜನ ವಿಕಾಸ ಸಮಿತಿಯ ಅಧ್ಯಕ್ಷ ಪಿ.ಎಸ್.ಸುರೇಶ್ ರಾವ್ ಪದಾಧಿಕಾರಿಗಳಾದ ಶ್ರೇಯಾ ಪುನರೂರು, ಆನಂದ ಮೆಲಂಟ, ಭಾಗ್ಯ ರಾಜೇಶ್, ಶಶಿಕರ ಕೆರೆಕಾಡು, ಸಹ ಶಿಕ್ಷಕಿಯರಾದ ಗೌರಿ, ಮೋಹಿನಿ, ಸರಿತಾ, ಅನಿತಾ, ನಿತೇಶ್ ಅನ್ನದಾಸೋಹದ ಶೈಲಜಾ ಉದಯಕುಮಾರ್, ಪ್ರೇಮಾ ಉಪಸ್ಥಿತರಿದ್ದರು.
ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು. ಉಪನ್ಯಾಸಕ ಜಿತೇಂದ್ರ ವಿ. ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15101701

Comments

comments

Comments are closed.

Read previous post:
Kinnigoli-14101703
ಪಾವಂಜೆ – ಸಿತಾರ್ ವಾದನ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸುಮುಖ ಮತ್ತು ಬಳಗದವರಿಂದ ಸಿತಾರ್ ವಾದನ ನಡೆಯಿತು.

Close