ಕಾಂತಾಬಾರೆ-ಬೂದಾ ಬಾರೆ ವಾಲಿಬಾಲ್ ಪಂದ್ಯಾಟ- 2017

ಕಿನ್ನಿಗೋಳಿ: ಗ್ರಾಮೀಣ ಭಾಗದ ಯುವ ಜನತೆ ಕ್ರೀಡಾ ಚಟುವಟಿಕೆಯ ಜೊತೆಗೆ ಆಶಕ್ತರಿಗೆ ನೆರವು ಹಾಗೂ ಶಿಕ್ಷಣಕ್ಕೆ ಸಹಕಾರದಂತಹ ಸಮಾಜ ಮುಖಿ ಚಿಂತನಾ ಕಾರ್ಯಗಳು ಬೇರೆ ಸಂಘ ಸಂಸ್ಥೆಗಳಿಗೆ ಪ್ರೇರಣೆ ಆಗಲಿ ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಹಾಗೂ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಕಾಂತಾಬಾರೆ -ಬೂದಾಬಾರೆ ಫ್ರೆಂಡ್ಸ್ ಐಕಳ ಇದರ ಆಶ್ರಯದಲ್ಲಿ ಐಕಳ ಕಂಬಳದ ಮಂಜೂಟ್ಟಿ ಗದ್ದೆಯ ಬಳಿಯ ಮೈದಾನದಲ್ಲಿ ಭಾನುವಾರ ನಡೆದ ಸಾಮಾಜಿಕ ಸೇವಾ ಚಟುವಟಿಕೆಗಳಾದ ಆಶಕ್ತ ಕುಟುಂಬಗಳಿಗೆ ಸಹಾಯಧನ, ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಗೌರವ ಹಾಗೂ ವಲಯ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ- 2017 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ ಕ್ರೀಡಾ ಚಟುವಟಿಕೆಯಿಂದ ಮಾನಸಿಕ ಉಲ್ಲಾಸ ಹಾಗೂ ಸ್ನೇಹ ಸೌಹಾರ್ದತೆ ಬೆಳೆಯಲು ಸಹಕಾರಿ ಎಂದು ಹೇಳಿದರು.
ಅನಾರೋಗ್ಯ ಪೀಡಿತರಾದ ಅಶೋಕ್ ಕೋಟ್ಯಾನ್, ಬಾಲಕಿ ಪ್ರತೀಕ್ಷಾ , ತುಳಸಿದಾಸ್ ಅವರ ವೈದ್ಯಕೀಯ ವೆಚ್ಚಕ್ಕೆ ಅರ್ಥಿಕ ಸಹಾಯ, ಸ್ಥಳೀಯ ಪ್ರತಿಭೆಗಳಾದ ಶುಭ ಶ್ರೀ , ಪೂಜಾ ಶ್ರೀ , ಕೃಷ್ಣ ಅವರಿಗೆ ವಿದ್ಯಾರ್ಥಿ ವೇತನ, ಹಿರಿಯ ಸಾಧಕ ಕೃಷಿಕರಾದ ಸಂಜೀವ ಶೆಟ್ಟಿ , ಕೃಷ್ಣ ಶೆಟ್ಟಿ ಹಾಗೂ ಧಾರ್ಮಿಕ ಕ್ಷೇತ್ರದ ಮುಂದಾಳು ಅರ್ಚಕರಾದ ಉಜ್ಜು ಪುಜಾರಿ, ದಯಾನಂದ , ನರ್ಸು ಮುಖಾರಿ, ಕೃಷ್ಣ ಪಾತ್ರಿ ಅವರನ್ನು ಸಮ್ಮಾನಿಸಲಾಯಿತು. ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ದುರ್ಗಾಪ್ರಸಾದ್ ಹೆಗ್ಡೆ, ಸೊರ್ಕಳಗುತ್ತು ಶಂಕರ ಶೆಟ್ಟಿ, ಐಕಳ ಕಾಂತಾಬಾರೆ – ಬೂದಾ ಬಾರೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷ ಶಶಿಧರ, ಮತ್ತಿತರರು ಉಪಸ್ಥಿತರಿದ್ದರು.
ಶ್ರೀಶ ಸರಾಫ್ ಐಕಳ ಸ್ವಾಗತಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.
ಎನ್. ವೈ. ಬಿ ನಿಡ್ಡೋಡಿ ಪ್ರಥಮ ಪ್ರಶಸ್ತಿ ಸಹಿತ ನಗದು ರೂ 11,117, ಹಾಗೂ ಮಹಮ್ಮಾಯೀ ಸಚ್ಚೇರಿಪೇಟೆ ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ 6667 ಪಡೆದುಕೊಂಡಿತು.

Kinnigoli-1710217014

Comments

comments

Comments are closed.

Read previous post:
Kinnigoli-1710217013
ಕೆರೆಕಾಡು ಗೂಡು ದೀಪ ಸ್ಪರ್ಧೆ

ಕಿನ್ನಿಗೋಳಿ: ನಾವು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ದೂರ ಮಾಡುತ್ತಿರುವ ಆಧುನಿಕ ಕಾಲಘಟ್ಟದಲ್ಲಿದ್ದು ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಇಲ್ಲಿನ ಸಂಘ ಸಂಸ್ಥೆಗಳು ಉತ್ತಮ ಕೆಲಸ...

Close