ಹಳೆಯಂಗಡಿ : ಬೆಳೆ ಕಾಣಿಕೆ ಹಬ್ಬ

ಕಿನ್ನಿಗೋಳಿ: ಭೂಮಿಯಲ್ಲಿ ಬೆಳೆಯುವ ಭತ್ತದ ತೆನೆಗಳು ನಮ್ಮ ಜೀವನಕ್ಕೆ ಆಸರೆಯಾಗುತ್ತದೆಯೋ ಅದೇ ರೀತಿ ನಾವೂ ಸಹ ಇತರರ ಕಷ್ಟಗಳಿಗೆ ಸ್ಪಂದಿಸಿದಾಗ ಆರೋಗ್ಯ ಸುಖ ಸಂಪತ್ತನ್ನು ದೇವರಿಂದ ಸಿಗುತ್ತದೆ ಎಂದು ಮಲ್ಪೆ ಸಿ.ಎಸ್.ಐ. ಅಬ್ನೇಜರ್ ಚರ್ಚ್‌ನ ಸಭಾಪಾಲಕ ರೆ.ಸುದೀರ್ ಆನಂದ್ ಹೇಳಿದರು.
ಹಳೆಯಂಗಡಿ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಸ್ಮಾರಕ ಚರ್ಚ್‌ನಲ್ಲಿ ಬೆಳೆ ಕಾಣಿಕೆ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಚರ್ಚ್‌ನಲ್ಲಿ ಧಾರ್ಮಿಕ ವಿಧಿ ವಿಧಾನವನ್ನು ಸಭಾಪಾಲಕ ರೆ.ಸೆಬೆಸ್ಟಿನ್ ಜೆ. ಜತ್ತನ್ನ ನೆರವೇರಿಸಿದರು.
ಈ ಸಂದರ್ಭ ಶಾಲಾ ಮಕ್ಕಳಿಂದ ಮತ್ತು ಮಹಿಳಾ ಸದಸ್ಯರಿಂದ ತುಳು ಹಾಡುಗಳ ಗಾಯನ ಹಾಗೂ ವಿವಿಧ ಆಟೋ ಸ್ಪರ್ಧೆಗಳನ್ನು ನಡೆಸಲಾಯಿತು.
ಸಭಾ ಪರಿಪಾಲನ ಸಮಿತಿಯ ಪ್ರಮುಖರಾದ ವಿಜಯ ಪ್ರಕಾಶ್ ಕರ್ಕಡ, ಜೋಫ್ರಿ ಕೊಟ್ಯಾನ್, ಮೋಸೆಸ್ ಪಿ. ಅಮ್ಮನ್ನ, ಜ್ಯೋತಿ ಸಿಡ್ನಿ ಕರ್ಕಡ, ರೆನಿಟಾ ಕರ್ಕಡ, ಎಲಿಸಬೆತ್ ಆಂಡ್ರೋಸ್ ಸ್ಥಳೀಯರಾದ ಎಚ್.ವಸಂತ ಬೆರ್ನಾಡ್, ಜಾರ್ಜ್ ಪಾಲನ್ನ, ಗೋಡ್ವಿನ್ ಕರ್ಕಡ, ನವೀನ್ ಶುಭಕರ ಕರ್ಕಡ, ಲಾವಣ್ಯ ಕೋಟ್ಯಾನ್, ಉದಯ ಬೆರ್ನಾಡ್, ಶೆರ್ಲಿ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-19101701

Comments

comments

Comments are closed.

Read previous post:
Kinnigoli-18101701
ಪುನರೂರು ಪ್ರತಿಷ್ಠಾನ ಕೃಷಿ ರತ್ನ ಪ್ರಶಸ್ತಿ

ಕಿನ್ನಿಗೋಳಿ: ಸರಕಾರ ರೈತರಿಗಾಗಿ ಹಲವಾರು ಯೋಜನೆಗಳು ಜಾರಿ ಮಾಡಿದರೂ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ರೈತವರ್ಗಕ್ಕೆ ತಲುಪಿಲ್ಲ ಎಂದು ಕಿನ್ನಿಗೋಳಿ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಕ್ಕ ಹೇಳಿದರು....

Close