ಕಿನ್ನಿಗೋಳಿ ಗೂಡುದೀಪ ಸರ್ಧೆ

ಕಿನ್ನಿಗೋಳಿ: ನಮ್ಮ ತುಳುನಾಡಿನ ಸಂಸ್ಕ್ರತಿ ಸಂಸ್ಕಾರ ಹಬ್ಬಹರಿದಿನಗಳ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸುವಂತಹ ಕಾರ್ಯ ಧಾರ್ಮಿಕ ಕೇಂದ್ರಗಳು, ಹಾಗೂ ಸಂಘ ಸಂಸ್ಥೆಗಳಿಂದಾಗಬೇಕು ಎಂದು ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಯುಗಪುರುಷ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮೂಲ್ಕಿ, ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು – ಕಿನ್ನಿಗೋಳಿ, ಯಕ್ಷಲಹರಿ (ರಿ.) ಕಿನ್ನಿಗೋಳಿ ಹಾಗೂ ವಿಜಯಾ ಕಲಾವಿದರು ಕಿನ್ನಿಗೋಳಿ ಸಂಸ್ಥೆಗಳ ಸಹಯೋಗದೊಂದಿಗೆ ದೀಪಾವಳಿ ಪ್ರಯುಕ್ತ ಬುಧವಾರ ಯುಗಪುರುಷ ಸಭಾಭವನದಲ್ಲಿ ನಡೆದ ಗೂಡುದೀಪ ಸ್ಪರ್ಧೆಯ ಬಹುಮನ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಹಿರಿಯ ಸಾಹಿತಿ ಕೆ. ಜಿ. ಮಲ್ಯ, ಡಾ. ಪ್ರಕಾಶ್ ನಂಬಿಯಾರ್, ಮೂಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಲಯನ್ಸ್ ವಲಯಾಧ್ಯಕ್ಷ ಸುಧಾಕರ ಶೆಟ್ಟಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಸ್ಮಿತಾ ಡಿಸೋಜ, ಪ್ರೇಮಲತಾ ಶೆಟ್ಟಿ, ಭ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಜಗದೀಶ್ ಸುಂಕದಕಟ್ಟೆ, ನಾಗರಾಜ್ ಕುಲಾಲ್, ಪ್ರಕಾಶ್ ಸಾಲ್ಯಾನ್, ರಾಮಣ್ಣ ಕುಲಾಲ್, ಪುರುಷೋತ್ತಮ್, ಕೆ. ಬಿ. ಸುರೇಶ್, ಸುರೇಶ್ ಪದ್ಮನೂರು, ಮತ್ತಿತರರು ಉಪಸ್ಥಿತರಿದ್ದರು.
ವಿಜಯಾ ಕಲಾವಿದರು ಸಂಸ್ಥೆಯ ಶರತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಕರ್ಕೇರಾ ವಂದಿಸಿದರು.
ವಿಜೇತರ ವಿವರ: ಸಾಂಪ್ರದಾಯಿಕ ವಿಭಾಗ-
ಪ್ರಥಮ- ದಾಮೋದರ ಕಟೀಲು,  ದ್ವಿತೀಯ- ಲಕ್ಷ್ಮೀಶ ಮಂಗಳೂರು, ತೃತೀಯ ವಿಘ್ನೇಶ ಮಂಗಳೂರು, ಮೆಚ್ಚುಗೆ ಪಡೆದವರು- ಸತೀಶ್ ಬೆಟ್ಕೇರಿ ಮೂಡಬಿದಿರೆ, ಉದಯ ಕುಮಾರ್ ತೋಕೂರು,

ಆಧುನಿಕ ವಿಭಾಗ:
ಪ್ರಥಮ- ಓಂಕಾರೇಶ್ವರೀ ಮಂದಿರ ತೋಕೂರು, ದ್ವಿತೀಯ- ವಿಠಲ್ ಭಟ್ ರಥಬೀದಿ ಮಂಗಳೂರು, ತೃತೀಯ – ರವಿರಾಜ್ ಕಾಪಿಕಾಡು ಮಂಗಳೂರು ಮೆಚ್ಚುಗೆ ಪಡೆದವರು: ಆದಿತ್ಯ ಗುರುಪುರ, ಗೌರೀಶ ಮಂಗಳೂರು.

Kinnigoli-19101709 Kinnigoli-191017010 Kinnigoli-191017011 Kinnigoli-191017012 Kinnigoli-191017013 Kinnigoli-191017014 Kinnigoli-191017015 Kinnigoli-191017016 Kinnigoli-191017017 Kinnigoli-191017018 Kinnigoli-191017019 Kinnigoli-191017020 Kinnigoli-191017021 Kinnigoli-191017022 Kinnigoli-191017023

Comments

comments

Comments are closed.

Read previous post:
Kinnigoli-19101708
ಶಿವ ಪುಷ್ಕರಣಿಯಲ್ಲಿ ಗಂಗಾ ಸ್ನಾನ

ಕಿನ್ನಿಗೋಳಿ: ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಒಳಪಟ್ಟ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಂಗಳವಾರ ತುಲಾ ಸಂಕ್ರಮಣದ ಪರ್ವಕಾಲದಲ್ಲಿ, ದೇವಳದ ಶಿವ ಪುಷ್ಕರಣಿಯಲ್ಲಿ ಸಾರ್ವಜನಿಕ ಗಂಗಾ ಸ್ನಾನ...

Close