ಶ್ರಮಿಕರು ಸತ್ಯದರ್ಶನದ ಪ್ರಾಮಾಣಿಕರು

ಮೂಲ್ಕಿ : ಶ್ರಮಿಕ ಶಕ್ತಿಯನ್ನು ಮುಖ್ಯವಾಹಿನಿಗೆ ತನ್ನಿರಿ, ಶ್ರಮಿಕರು ಸತ್ಯದರ್ಶನದ ಪ್ರಾಮಾಣಿಕರಾಗಿರುವುದರಿಂದ, ಅವರಿಗೆ ಚೇತೋಹಾರಿ ಮಾರ್ಗದರ್ಶನ ಅಗತ್ಯ, ಅವರಿಗೂ ಸಾಮಾಜಿಕ ಜವಬ್ದಾರಿಗಳಿದೆ. ತೆರೆದ ಮನಸ್ಸಿನಿಂದ ಜಗತ್ತನ್ನು ಕಾಣುವಂತಹ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಬೇಕು. ಸತ್ಯದ ಮಗ್ಗುಲುಗಳನ್ನು ಗ್ರಹಿಸುವ ಸೂಕ್ಷ್ಮ ಸಂವೇದನೆಯ ವ್ಯಕ್ತಿತ್ವ ಶ್ರಮಿಕರಲ್ಲಿದೆ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞರು, ವೈಜ್ಞಾನಿಕ ಜ್ಯೋತಿಷಿಗಳು ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿ ನುಡಿದರು.
ಅವರು ತಮ್ಮ ಹುಟ್ಟೂರಾದ ಮೂಲ್ಕಿಯಲ್ಲಿ ವರ್ಷಂಪ್ರತಿ ನಡೆಸುವ ಶ್ರಮಿಕರ ಶ್ರೇಯಸ್ಸಿಗೆ ದೀಪಾವಳಿಯ ಸಂಭ್ರಮವನ್ನು ಮೂಲ್ಕಿ ಗೇರುಕಟ್ಟೆಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವಾಶ್ರಮದಲ್ಲಿ ಚಾಲನೆ ನೀಡಿ ಆಶೀರ್ವಚನವನ್ನು ನೀಡಿದರು.
ಈ ಸಂದರ್ಭದಲ್ಲಿ ಸೇವಾಶ್ರಮದ ಹಿರಿಯ ಮಾರ್ಗದರ್ಶಕರಾಗಿದ್ದ ಎಸ್.ಗೋವಿಂದ ಭಟ್ ಕಿಲ್ಪಾಡಿ ಹಾಗೂ ವೇದೋಧ್ಯಯನದ ಪಂಡಿತರಾಗಿದ್ದ ಶ್ರೀನಿವಾಸ ತಂತ್ರಿಗಳ ಸಂಸ್ಮರಣೆ ನಡೆಯಿತು.
ಮೂಲ್ಕಿ ಕಾರು ಮತ್ತು ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ಮೂಲ್ಕಿ ರಿಕ್ಷಾ ಯೂನಿಯನ್‌ನ ಅಧ್ಯಕ್ಷ ಮೋಹನ್ ಕುಬೆವೂರು, ಕಾರ್ನಾಡು ರಿಕ್ಷಾ ಯೂನಿಯನ್‌ನ ಅಧ್ಯಕ್ಷ ಶಶಿ ಅಮೀನ್, ಕೊಲ್ನಾಡು ರಿಕ್ಷಾ ಯೂನಿಯನ್‌ನ ಅಧ್ಯಕ್ಷ ಉಮೇಶ್ ದೇವಾಡಿಗ, ಹಳೆಯಂಗಡಿ ರಿಕ್ಷಾ ಯೂನಿಯನ್‌ನ ಅಧ್ಯಕ್ಷ ಚಂದ್ರಶೇಖರ ಕದಿಕೆ, ಪಕ್ಷಿಕೆರೆ ಚರ್ಚ್ ನಿಲ್ದಾಣದ ರಿಕ್ಷಾ ಯೂನಿಯನ್ ಅಧ್ಯಕ್ಷ ನಾಗೇಶ್ ಶೆಟ್ಟಿ, ಪಕ್ಷಿಕೆರೆ ರಿಕ್ಷಾ ಯೂನಿಯನ್ ಅಧ್ಯಕ್ಷ ನಾರಾಯಣ ಶೆಟ್ಟಿಗಾರ್‌ರಿಗೆ ಶ್ರಮಿಕರ ಸಾಧನೆಗೆ ಸಾರ್ಥಕ ಪುರಸ್ಕಾರವನ್ನು ನೀಡಿ ಆಶ್ರಮದಿಂದ ಗೌರವಿಸಲಾಯಿತು.
ವೇದಿಕೆಯಲ್ಲಿ ಸೇವಾಶ್ರಮದ ಸಂಚಾಲಕರಾದ ರಜನಿ ಸಿ. ಭಟ್, ಸಲಹೆಗಾರರಾದ ಶಾರದಮ್ಮಾ ಗೋವಿಂದ ಭಟ್, ಪುಷ್ಪಲತಾ ಶ್ರೀನಿವಾಸ ತಂತ್ರಿ, ಮಾಧವ ತಂತ್ರಿ, ಬೆಂಗಳೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಮಂಜುನಾಥ ಹೆಗ್ಡೆ, ಸೇವಾಶ್ರಮದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಕಾಮತ್ ಮೂಲ್ಕಿ, ಸಾಧಿಕ್ ಅಹ್ಮದ್ ಉಡುಪಿ, ನಿರ್ದೇಶಕರಾದ ಪೂಜಾ ಸಿ. ಭಟ್, ರಾಹುಲ್ ಸಿ. ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸೇವಾಶ್ರಮದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ಭಟ್ ಸ್ವಾಗತಿಸಿದರು, ಸ್ವಾಮೀಜಿಯವರ ಆಪ್ತ ಸಹಾಯಕ ವಿಜಯಕುಮಾರ್ ವಂದಿಸಿದರು. ಕಾರ್ಯಕ್ರಮದ ಸಂಯೋಜಕ ಹಾಗೂ ಮಾಧ್ಯಮ ಸಲಹೆಗಾರ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

ಸೇವಾಶ್ರಮದಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ವಸ್ತ್ರಧಾನ, ಸಿಹಿ ಉಡುಗೊರೆ, ಅಕ್ಕಿಯನ್ನು ಒಟ್ಟು 1670 ಮಂದಿಗೆ ಸ್ವತಃ ಸ್ವಾಮೀಜಿಯವರೇ ತಮ್ಮ ಕುಟುಂಬದವರಿಂದ ವಿತರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ಗಾನ ವೈಭವದಲ್ಲಿ ಸ್ವತಹ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ಅವರ ಪುತ್ರಿ ಪೂಜಾ ಸಿ. ಭಟ್ ಹಾಡಿ ರಂಜಿಸಿದರು.

ಗಣ್ಯ ವ್ಯಕ್ತಿಗಳ ಭೇಟಿ…
ದೀಪಾವಳಿ ಸಂಭ್ರಮದ ಶ್ರಮಿಕರ ಸಾರ್ಥಕತೆಯ ಕಾರ್ಯಕ್ರಮದಲ್ಲಿ ವಿಶೇಷ ಪೊಲೀಸ್ ಬಂದೋ ಬಸ್ತನ್ನು ನೀಡಿದ್ದರಿಂದ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅವರನ್ನು ಆಶ್ರಮದ ವತಿಯಿಂದ ಗೌರವಿಸಿದರು.
ಈ ಸಂದರ್ಭದಲ್ಲಿ ಉಡುಪಿ ವರಿಷ್ಠಾಧಿಕಾರಿ ಸಂಜೀವ ಪಾಟೀಲ್, ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ ಹನುಮಂತರಾಯಪ್ಪ, ಹಿರಿಯ ಅಧಿಕಾರಿ ವೆಲೇಂಟೇನ್ ಡಿಸೋಜಾ, ಉತ್ತರ ವಲಯದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ಸಹಿತ, ಗಣ್ಯರು, ಜನಪ್ರತಿನಿಧಿಗಳು, ಗ್ರಾಮಸ್ಥರು ಭೇಟಿ ನೀಡಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದರು.

Kinnigoli-191017024

Comments

comments

Comments are closed.