ಕಾಂಗ್ರೆಸ್ ಅಭಿವೃದ್ಧಿ ಪರ, ಬಿಜೆಪಿ ಭ್ರಷ್ಟಾಚಾರ ಪರ

ಕಿನ್ನಿಗೋಳಿ: ಕಾಂಗ್ರೆಸ್ ಆಡಳಿತದ ಸರಕಾರ ಜನಪರ ಯೋಜನೆಯಿಂದ ಅಭಿವೃದ್ಧಿ ಪರವಾಗಿದ್ದರೆ, ಬಿಜೆಪಿ ಭ್ರಷ್ಟಾಚಾರ ಪರ. ಜನರಿಗೆ ಸರಕಾರದ ಸಾಧನೆಯ ಬಗ್ಗೆ ತಿಳಿಹೇಳಲು ಕಾಂಗ್ರೆಸ್‌ನ ಕಾರ್ಯಕರ್ತರು ಸಂಘಟಿತರಾಗಿ ಮನೆ ಮನೆ ಭೇಟಿ ನೀಡುವ ಕಾರ್ಯಕ್ರಮ ಪಕ್ಷದ ಬೆಳವಣಿಗೆಗೆ ಪೂರಕ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಪಡುಪಣಂಬೂರು ಕಾಂಗ್ರೆಸ್ ಸಮಿತಿಯಿಂದ ತೋಕೂರು, ಎಸ್.ಕೋಡಿ, 10ನೇ ತೋಕೂರು ಪರಿಸರದಲ್ಲಿ ಕಾಂಗ್ರೆಸ್ ಪಕ್ಷದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸಿದ್ಧರಾಮಯ್ಯರ ಸರಕಾರವನ್ನೇ ಮುಂದಿನ ಚುನಾವಣೆಯಲ್ಲೂ ಆಡಳಿತಕ್ಕೆ ತರುವ ವಿಶ್ವಾಸವನ್ನು ಜನರೇ ಕಾರ್ಯಕರ್ತರಿಗೆ ಮಾಹಿತಿ ನೀಡುತ್ತಿದ್ದಾರೆ ಹಾಗಾಗಿ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ. ಸದಸ್ಯ ಎಚ್. ವಸಂತ ಬೆರ್ನಾಡ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ಕ್ಷೇತ್ರದಲ್ಲಿ ಶಾಸಕ ಕೆ. ಆಭಯಚಂದ್ರ ಜೈನ್ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕರಪತ್ರ ಹಂಚುವ ಮೂಲಕ ಮಾಹಿತಿ ನೀಡಿದರು.
ಮಹಿಳಾ ಬ್ಲಾಕ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಮಾಜಿ ಜಿ.ಪಂ. ಅಧ್ಯಕ್ಷೆ ಸುಗಂಧಿ ಕೊಂಡಾಣ, ಕಿನ್ನಿಗೋಳಿ ಗ್ರಾ.ಪಂ. ಸದಸ್ಯೆ ಸುನಿತಾ ಕಿನ್ನಿಗೋಳಿ, ಪಡುಪಣಂಬೂರು ಗ್ರಾಮ ಸಮಿತಿಯ ಅಧ್ಯಕ್ಷೆ ಸವಿತಾ ಶರತ್ ಬೆಳ್ಳಾಯರು ಸ್ಥಳೀಯ ಪ್ರಮುಖರಾದ ಲತಾ ಕಲ್ಲಾಪು, ದಿನೇಶ್ ಸುವರ್ಣ, ರಾಜು ಕುಂದರ್, ಎಂ.ಎ.ವಾಹಿದ್ ತೋಕೂರು, ದಾಮೋದರ ಸುವರ್ಣ ಎಸ್.ಕೋಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-19101707

Comments

comments

Comments are closed.

Read previous post:
Kinnigoli-19101706
ಉಲ್ಲಂಜೆ ಕೊರಗಜ್ಜ ಸ್ವರ್ಣ ಕವಚ ಸಮರ್ಪಣೆ

ಕಿನ್ನಿಗೋಳಿ: ತುಳುನಾಡಿನಲ್ಲಿ ದೈವಗಳು ದೇವರುಗಳುಷ್ಟೆ ಕಾರಣಿಕಹೊಂದಿದ್ದು ನಂಬಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಇಷ್ಟಾರ್ಥವನ್ನು ಕೊಡುವಂತ ಮಹಾನ್ ಶಕ್ತಿ ಹೊಂದಿದೆ ಎಂದು ಕೊಡೆತ್ತೂರು ದೇವಸ್ಯ ಮಠ...

Close