ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ: ಯುವಕರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ರಕ್ಷಿಸುವುದೇ ನಿಜವಾದ ಸಮಾಜ ಸೇವೆ ಎಂದು ಪಕ್ಷಿಕೆರೆ ಚರ್ಚ್ ಸಹಾಯಕ ದರ್ಮಗುರು ಫಾ. ಕ್ಲಿಫರ್ಡ್ ಪಿಂಟೋ ಹೇಳಿದರು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕೋತ್ಸವ ಅಂಗವಾಗಿ ಹಾಗೂ ಭಾರತೀಯ ಕಥೋಲಿಕ ಯುವ ಸಂಚಾಲನ ಕಿನ್ನಿಗೋಳಿ ವಲಯ, ಭಾರತೀಯ ಕಥೋಲಿಕ ಯುವ ಸಂಚಾಲನ ಪಕ್ಷಿಕೆರೆ ಘಟಕ, ಸೈಂಟ್ ಜೂಡ್ ಎಸೊಶಿಯೇಶನ್ ಪಕ್ಷಿಕೆರೆ, ಟ್ರೈಡೆಂಟ್ ಟ್ರಕ್ಕಿಂಗ್ ಮೂಲ್ಕಿ, ರೋಟರಿ ಕ್ಲಬ್ ಕಿನ್ನಿಗೋಳಿ, ಫಾ| ಮುಲ್ಲರ‍್ಸ್ ಆಸ್ಪತ್ರೆ ಮಂಗಳೂರು ಮತ್ತು ವಿವಿದ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಪಕ್ಷಿಕೆರೆ ಚರ್ಚಿನಲ್ಲಿ ನಡೆದ ಬ್ರಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಫಾ| ಮುಲ್ಲರ‍್ಸ್ ಆಸ್ಪತ್ರೆಯ ರಕ್ತ ನಿಧಿಯ ಮುಖ್ಯಸ್ಥೆ ಡಾ| ಕ್ಸಿಸ್ಟಲ್, ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ದರ್ಮಗುರು ರೆ.ಫಾ. ಆಂಡ್ರು ಲಿಯೋ ಡಿಸೋಜ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವ್ರಿನ್ ಲೋಬೊ, ಪಕ್ಷಿಕೆರೆ ಐ.ಸಿ.ವೈ.ಯಮ್ ಅಧ್ಯಕ್ಷ ಚೇತನ್ ರೋಡ್ರಿಗಸ್, ಸೈಂಟ್ ಜೂಡ್ ಎಸೊಶಿಯೇಶನ್ ಅಧ್ಯಕ್ಷ ಜೋಯಲ್ ಡಿಸೋಜ, ಟ್ರೈಡೆಂಟ್ ಟ್ರಕ್ಕಿಂಗಿನ ಮ್ಯಾನೆಜರ್ ದಿನಕರ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ವಲಯದ ಐ.ಸಿ.ವೈ.ಯಮ್ ಅಧ್ಯಕ್ಷೆ ಪ್ರೀಮಾ ಪಿಂಟೊ ಸ್ವಾಗತಿಸಿದರು. ಪಕ್ಷಿಕೆರೆ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾಕ್ಸನ್ ಸಲ್ಡಾನ ವಂದಿಸಿದರು. ರೋಬರ್ಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigoli-19101702

Comments

comments

Comments are closed.

Read previous post:
Kinnigoli-19101701
ಹಳೆಯಂಗಡಿ : ಬೆಳೆ ಕಾಣಿಕೆ ಹಬ್ಬ

ಕಿನ್ನಿಗೋಳಿ: ಭೂಮಿಯಲ್ಲಿ ಬೆಳೆಯುವ ಭತ್ತದ ತೆನೆಗಳು ನಮ್ಮ ಜೀವನಕ್ಕೆ ಆಸರೆಯಾಗುತ್ತದೆಯೋ ಅದೇ ರೀತಿ ನಾವೂ ಸಹ ಇತರರ ಕಷ್ಟಗಳಿಗೆ ಸ್ಪಂದಿಸಿದಾಗ ಆರೋಗ್ಯ ಸುಖ ಸಂಪತ್ತನ್ನು ದೇವರಿಂದ ಸಿಗುತ್ತದೆ ಎಂದು...

Close