ಕಟೀಲು ಮಹಿಳಾ ಸ್ವರಕ್ಷಾ ತರಬೇತಿ

ಕಟೀಲು: ಕಟೀಲು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವರಕ್ಷಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 1.11 ಲಕ್ಷ ವಿದ್ಯಾರ್ಥಿನಿಯರಿಗೆ ಸ್ವರಕ್ಷಾ ತರಬೇತಿ ನೀಡಿರುವ ಕಾರ್ತಿಕ್.ಎಸ್.ಕಟೀಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ದೌರ್ಜನ್ಯಕ್ಕೊಳಗಾದಾಗ ತಮ್ಮನ್ನುತಾವೇ ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ಸರಳ ವಿಧಾನಗಳ ಮೂಲಕ ತನ್ನ ತಾಯಿ ಶೋಭಲತಾ ಅವರೊಂದಿಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉಪಪ್ರಾಂಶುಪಾಲ ಸೋಮಪ್ಪಅಲಂಗಾರ್ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
Kateel-23101701

Comments

comments

Comments are closed.

Read previous post:
Kinnigolii-23101701
ಅನಂತ ಪ್ರಕಾಶ ವಿಂಶತಿ ವರ್ಷಾಚರಣೆ

ಕಿನ್ನಿಗೋಳಿ : ಕೈಯಲ್ಲಿ ಮೊಬೈಲ್ ಇರದೆ ಪುಸಕ್ತ ಇರುವಂತಾಗಲಿ. ಪುಸ್ತಕಗಳಿಂದ ನಮ್ಮ ಜ್ಞಾನ ಭಂಡಾರ ಹೆಚ್ಚುತ್ತದೆ. ಅನಂತಪ್ರಕಾಶನದ ಕನ್ನಡ, ಸಾಹಿತ್ಯದ ಸೇವೆ ಅಭಿನಂದನೀಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ...

Close