ರಾಮ ಮಂದಿರ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಭಜನೆ ಮೂಲಕ ಮಾನಸಿಕ ಏಕಾಗ್ರತೆ ಕಂಡುಕೊಂಡು ಭಗವಂತನನ್ನು ಮೆಚ್ಚಿಸಬಹುದು ಪುರಂದರದಾಸ, ಕನಕದಾಸರಂತಹ ದಾಸ ಶ್ರೇಷ್ಟರು ನಮಗೆ ಆದರ್ಶಪ್ರಾಯರು ಎಂದು ಕಿನ್ನಿಗೋಳಿ ಜಿಎಸ್‌ಬಿ ಎಸೋಸಿಯೇಶನ್ ಟ್ರಸ್ಟ್ ಅಧ್ಯಕ್ಷ ಕೆ. ಅಚ್ಚುತ ಮಲ್ಯ ಹೇಳಿದರು. ಸೋಮವಾರ ನಡೆದ ಕಿನ್ನಿಗೋಳಿ ಶ್ರೀರಾಮ ಮಂದಿರದ 66ನೇ ನಗರ ಸಂಕೀರ್ತನಾ ಭಜನ ಮಂಗಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಅರ್ಚಕ ವೆ. ಮೂ. ಗಿರೀಶ್ ಭಟ್ ಮಾತನಾಡಿ ನಮ್ಮ ಪೂರ್ವಿಕರು ಬೆಳೆಸಿಕೊಂಡು ಬಂದ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಈ ಸಂದರ್ಭ ಸಮಿತಿ ಕಾರ್ಯದರ್ಶಿ ಸುರೇಂದ್ರನಾಥ ಶೆಣೈ, ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಕೋಶಾಧಿಕಾರಿ ಉಮೇಶ್ ಕಾಮತ್, ಸದಸ್ಯರಾದ ರಾಜೇಶ್ ನಾಯಕ್, ಮುಕಂದನಾಯಕ್, ರಾಮನಾಥ್ ನಾಯಕ್, ರಾಮದೇವ್ ಶೆಣೈ, ರಾಧಾಕೃಷ್ಣ ನಾಯಕ್, ಮಾತೃ ಮಂಡಳಿಯ ಅಧ್ಯಕ್ಷೆ ಭಾರತೀ ಶೆಣೈ, ಉಪಾಧ್ಯಕ್ಷೆ ವಿಜಯಾ ಪ್ರಭು, ಕಾರ್ಯದರ್ಶಿ ರಂಜಿನಿ ರಾವ್ ಸದಸ್ಯರಾದ ವಾರಿಜಾ ಕಾಮತ್, ಪೂಜಾ ನಾಯಕ್, ಸಂಧ್ಯಾ ಮಲ್ಯ, ಸೀಮಾ ಭಟ್, ರತ್ನಾಕರ ರಾವ್, ಅಚ್ಚುತ ಕುಡ್ವ, ಪ್ರವೀಣ್ ಕುಡ್ವ, ಶಾಂತಾರಾಮ ಬಟ್ ಗೋವಿಂದರಾಯ್ ಶೆಣೈ, ರಘುವೀರ ಕಾಮತ್, ಅನಂತ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
Kinnigolii-23101705

Comments

comments

Comments are closed.

Read previous post:
Kinnigolii-23101704
ಪಾವಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಗಾರ್ಗಿ ಶಬರಾಯ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು.

Close